Bengaluru, ಫೆಬ್ರವರಿ 26 -- "ಶಂಕರ್‌ ನಾಗ್‌ ಅವರ ಜತೆ ನಾನೊಂದು ಸಿನಿಮಾ ಮಾಡಿದ್ದೆ. ಆ ಸಿನಿಮಾ ಹೆಸರು ನಿಗೂಢ ರಾತ್ರಿಗಳು. ಅದೇ ಅವರ ಕೊನೇ ಸಿನಿಮಾ ಕೂಡ. ಸಂಕೇತ್‌ ಥಿಯೇಟರ್‌ನಲ್ಲಿ ಆ ಸಿನಿಮಾದ ನನ್ನ ಭಾಗದ ಡಬ್ಬಿಂಗ್‌ ಮಾಡುತ್ತಿದ್ದೆ"

"ಡಬ್ಬಿಂಗ್‌ ಮುಗಿಸಿಕೊಂಡು, ನಮ್ಮ ಅಪ್ಪ ಅಮ್ಮ ದಾವಣಗೆರೆಯಲ್ಲಿದ್ದರು. ಅಲ್ಲಿಗೆ ಹೋಗಬೇಕಿತ್ತು. ರಾತ್ರಿ 9:30ಕ್ಕೆ ಬೆಂಗಳೂರಿಂದ ಬಸ್‌ ಟಿಕೆಟ್‌ ಬುಕ್‌ ಆಗಿತ್ತು"

"ಸಂಜೆ 7 ಗಂಟೆ ಸುಮಾರಿಗೆ ಶಂಕರ್‌ ನಾಗ್‌ ಸ್ಟುಡಿಯೋಕ್ಕೆ ಬಂದ್ರು. ನಾನು ಸಾಂಗ್‌ ಟ್ರಾನ್ಸ್‌ಫರ್‌ ಮಾಡಬೇಕಿತ್ತು. ಅದರ ಸಲುವಾಗಿ ಡಬ್ಬಿಂಗ್‌ ನಿಲ್ಲಿಸಿದ್ರು. ಇನ್ನೊಂದು ರೀಲ್‌ ಮುಗಿಸಿದ್ರೆ, ನನ್ನ ಡಬ್ಬಿಂಗ್‌ ಮುಗಿಯುತ್ತಿತ್ತು"

"ಸರ್‌ ಅದೊಂದು ರೀಲ್‌ ಮುಗಿಸಿಬಿಡ್ತಿನಿ. ಊರಿಗೆ ಹೊರಡಬೇಕು.." ಎಂದು ಕೇಳಿಕೊಂಡೆ.. "ಹೇ ಇರೋ ಒಂದೈದು ನಿಮಿಷ. ಫೈಲ್ ಟ್ರಾನ್ಸ್‌ಫರ್‌ ಮಾಡ್ತಿನಿ. ತಲೆ ಯಾಕೆ ಕೆಡಿಸ್ಕೋತಿಯಾ?" ಅಂದ್ರು. ಐದು ನಿಮಿಷ ಅಂದವರು 8:45 ಆಯ್ತು. ನಂಗೆ ನೋಡಿದ್ರೆ, 9:30ಕ್ಕೆ ದಾವಣಗೆರೆಗೆ ಬಸ್‌. ಆಮ...