ಭಾರತ, ಮಾರ್ಚ್ 28 -- ಒಬ್ಬ ಹಿಂದೂ. ಒಬ್ಬ ಮುಸ್ಲಿಂ. ಹೆಸರು ಮೋಹನ್‌ ಲಾಲ್‌ ಮತ್ತು ಮಮ್ಮುಟ್ಟಿ. ಮಲಯಾಳಂ ಸಿನಿಮಾರಂಗದ ಎರಡು ಆಧಾರಸ್ತಂಭಗಳಂತೆ ಹಲವು ದಶಕಗಳಿಂದ ಆಳಿದವರು. ಇವರು ಸಿನಿಮಾರಂಗದಲ್ಲಿ ಸ್ಪರ್ಧಿಗಳೂ ಹೌದು. ಒಳ್ಳೆಯ ಗೆಳೆಯರು ಹೌದು. ಒಬ್ಬ ಸ್ಟೇಜ್‌ ಮೇಲೆ ಭಾಷಣ ಮಾಡಿದಾಗ ಮತ್ತೊಬ್ಬ ವೇದಿಕೆಯ ಕೆಳಗೆ ಕುಳಿತು ಚಪ್ಪಾಳೆ ಹೊಡೆಯಲು ಹಿಂಜರಿಯುವುದಿಲ್ಲ. ಇಂತಹ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್‌ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಆದದ್ದಿಷ್ಟು. ಮೋಹನ್‌ ಲಾಲ್‌ ಶಬರಿಮಲೆಗೆ ಹೋಗಿದ್ದಾರೆ. ಗೆಳೆಯ ಮಮ್ಮುಟ್ಟಿಗೆ ಹುಷಾರಿಲ್ಲ ಎನ್ನುವ ವಿಷಯ ಗೊತ್ತು. ಗೆಳೆಯನಿಗ ಒಳ್ಳೆಯದಾಗಲಿ ಎಂದು ಮಮ್ಮಟ್ಟಿ ಹೆಸರಲ್ಲಿ ಪೂಜೆ ಮಾಡಿಸಿದ್ದಾರೆ. ಇಷ್ಟೇ ನಡೆದದ್ದು. ಆದರೆ, ಈ ಪ್ರಾರ್ಥನೆ ವಿವಾದದ ಸ್ವರೂಪ ಪಡೆಯಿತು. ಸೋಷಿಯಲ್‌ ಮೀಡಿಯಾದಲ್ಲಿ ಧರ್ಮ ಜಿಜ್ಞಾಸೆಗಳು ಆರಂಭವಾದವು. ಹಿಂದೂ ಮುಸ್ಲಿಂ ಪರ ವಿರೋಧ ಚರ್ಚೆಗಳು ನಡೆಯಿತು. ಮುಸ್ಲಿಂಗಾಗಿ ಹಿಂದೂ ದೇಗುಲದಲ್ಲಿ, ಹಿಂದೂವಿಗಾಗಿ ಮುಸ್ಲಿಂ ಮಸೀದಿಯಲ್ಲಿ ಪ್ರಾರ್ಥಿಸುವುದು ವ...