Bengaluru, ಫೆಬ್ರವರಿ 27 -- Vikash Uthaiah Interview: ಜೀ ಕನ್ನಡದಲ್ಲಿ ಅಣ್ಣಯ್ಯ ಸೀರಿಯಲ್‌ (Annayya Serial) ಮೂಲಕವೇ ಕರುನಾಡಿನ ಮನೆ ಮನಗಳನ್ನು ತಲುಪಿದ್ದಾರೆ ಮಾರಿಗುಡಿ ಶಿವಣ್ಣ. ನಾಲ್ಕು ತಂಗಿಯರ ಅಣ್ಣಯ್ಯನಾಗಿ, ಮುಗ್ಧತೆ ಮೂಲಕವೇ ತಮ್ಮ ಪಾತ್ರವನ್ನು ವೀಕ್ಷಕರೆಡೆಗೆ ದಾಟಿಸುತ್ತಿದ್ದಾರೆ ನಟ ವಿಕಾಶ್‌ ಉತ್ತಯ್ಯ. ಇದೀಗ ಇದೇ ವಿಕಾಶ್‌ ಅವರ ಸಿನಿಮಾ "ಅಪಾಯವಿದೆ ಎಚ್ಚರಿಕೆ" (Apaayavide Eccharike) ಈ ವಾರ (ಫೆ. 28) ತೆರೆಗೆ ಬರುತ್ತಿದೆ. ಈ ನಡುವೆ ಸಿನಿಮಾ ಮತ್ತು ಸೀರಿಯಲ್‌ ಪಯಣದ ಬಗ್ಗೆ "HT ಕನ್ನಡ"ದ ಜತೆಗೆ ಎಕ್ಸ್‌ಕ್ಲೂಸಿವ್‌ ಆಗಿ ಮಾತನಾಡಿದ್ದಾರೆ.

"ಇದಕ್ಕೂ ಮುಂಚೆ ನನ್ನ ಎರಡು ಸಿನಿಮಾಗಳು ಬಿಡುಗಡೆ ಆಗಿದ್ದವು. ಆನ ಮತ್ತು ಮೇರಿ. ಆ ಸಮಯದಲ್ಲಿ, ಹೊಸ ಹುಡುಗ, ಹೊಸ ಪ್ರತಿಭೆ ಅಂತ ಇತ್ತು. ಹೊಸ ಹೀರೋ ಅನ್ನೋ ಚಾಲೆಂಜ್‌ ಇತ್ತು. ಜನರನ್ನು ಥಿಯೇಟರ್‌ಗೆ ಹೇಗೆ ಕರೆಸೋದು ಅನ್ನೋ ಗೊಂದಲ ಇತ್ತು. ಇದೀಗ ಅಣ್ಣಯ್ಯ ಪ್ರತಿ ಮನೆ ಮನೆಗೆ ಗೊತ್ತಿರೋದ್ರಿಂದ. ಈಸಿಯಾಗಿ ಕನೆಕ್ಟ್‌ ಆಗ್ತಿದ್ದೇನೆ. ಎಲ್ಲರೂ ಸೀರಿಯಲ...