Bengaluru, ಮಾರ್ಚ್ 3 -- Marco Movie Review: ಮಲಯಾಳಿ ನಟ ಉನ್ನಿಮುಕುಂದನ್ ಅಭಿನಯದ ಮಾರ್ಕೊ ಚಿತ್ರಮಂದಿರಗಳಲ್ಲಿ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿದೆ. ಕಲೆಕ್ಷನ್‌ ವಿಚಾರದಲ್ಲಿ 120 ಕೋಟಿ ಪ್ಲಸ್‌ ಗಳಿಕೆ ಕಂಡಿದೆ. ಹನೀಪ್‌ ಅದಾನಿ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಸದ್ಯ ಸೋನಿ ಲೀವ್‌ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಿದೆ. ಇಂತಿಪ್ಪ ಸಿನಿಮಾವನ್ನು ಪ್ರಕಾಶಕ, ವಿಷ್ಣುವರ್ಧನ್‌ ಅವರ ಅಪ್ಪಟ ಅಭಿಮಾನಿ ವೀರಕ ಪುತ್ರ ಶ್ರೀನಿವಾಸ್‌ ವೀಕ್ಷಣೆ ಮಾಡಿ, ತಮ್ಮದೇ ಸ್ಟೈಲ್‌ನಲ್ಲಿ ವಿಮರ್ಶೆ ಮಾಡಿದ್ದಾರೆ. 'ಕೈ ಕತ್ತರಿಸ್ತಾರೆ, ಕಾಲು ಕತ್ತರಿಸಿ ಎಸೀತಾರೆ, ನಾಲಿಗೆ ಕೀಳ್ತಾರೆ, ನರ ಎಳೀತಾರೆ, ಮಾರ್ಕೊ ಚಿತ್ರಕ್ಕೆ ಮಾರ್ ದೋ ಅಂತ ಹೆಸರಿಡಬೇಕಿತ್ತು!' ಎಂದಿದ್ದಾರೆ ಶ್ರೀನಿವಾಸ್‌. ಇಲ್ಲಿದೆ ಪೂರ್ತಿ ಬರಹ.

ಮಾರ್ಕೊ ಚಿತ್ರಕ್ಕೆ ಮಾರ್ ದೋ ಅಂತ ಹೆಸರಿಡಬೇಕಿತ್ತು! ಯಾರಾದ್ರೂ ಓದುವುದರಲ್ಲಿ ಮಾಸ್ಟರ್ಸ್ ಮಾಡ್ತಾರೆ. ಆದ್ರೆ ನಾನು ಕೊಲ್ಲುವುದರಲ್ಲಿ ಮಾಸ್ಟರ್ಸ್ ಮಾಡಿದ್ದೇನೆ ಅನ್ನೋದು ತೆಲುಗಿನ ಬಾಲಕೃಷ್ಣನ ಫೇಮಸ್ ಡೈಲ...