ಭಾರತ, ಮಾರ್ಚ್ 8 -- Meghana Raj sarja about Second Marriage: 2020ರ ಜೂನ್‌ನಲ್ಲಿ ಕೋವಿಡ್‌ ಅನ್ನೋ ಮಹಾಮಾರಿಯ ಅಟ್ಟಹಾಸದ ನಡುವೆ, ಸ್ಯಾಂಡಲ್‌ವುಡ್‌ಗೆ ಬರಸಿಡಿಲೊಂದು ಬಂದೆರಗಿತ್ತು. ಖುಷಿಯಾಗಿ, ಆರೋಗ್ಯವಾಗಿಯೇ ಇದ್ದ ನಟ ಚಿರಂಜೀವಿ ಸರ್ಜಾ, ಅಕಾಲಿಕವಾಗಿ ನಿಧನರಾಗಿ ದೊಡ್ಡ ನೋವನ್ನು ತಂದಿಟ್ಟು ಹೋದರು. ಪತ್ನಿ ಮೇಘನಾ ರಾಜ್‌ ಆಗ ಐದು ತಿಂಗಳ ಗರ್ಭಿಣಿ. ಸರ್ಜಾ ಕುಟುಂಬದ ಸ್ಥಿತಿ ಕಂಡು ಇಡೀ ಕರುನಾಡು ಮಮ್ಮಲ ಮರುಗಿತ್ತು. ಹೀಗಿರುವಾಗಲೇ ಇನ್ನೇನು ಜೂನ್‌ ಬಂತೆಂದರೆ, ಚಿರು ಇಲ್ಲದೆ ಐದು ವರ್ಷಗಳಾಗಲಿವೆ. ಈ ಐದು ವರ್ಷಗಳ ಅವಧಿಯಲ್ಲಿ, ಸಾಕಷ್ಟು ಏರಿಳಿತಗಳನ್ನು ಕಂಡಿರುವ ಮೇಘನಾಗೆ, ಎರಡನೇ ಮದುವೆಯ ಬಗ್ಗೆಯೂ ಸಾಕಷ್ಟು ಪ್ರಶ್ನೆಗಳು ಎದುರಾಗಿವೆ.

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಿರುವ ನಟಿ ಮೇಘನಾ ರಾಜ್‌, ಮಗ ರಾಯನ್‌ ಜತೆಗಿನ ಅಮೂಲ್ಯ ಕ್ಷಣಗಳನ್ನು ಪೋಸ್ಟ್‌ ಮಾಡುತ್ತಲಿರುತ್ತಾರೆ. ತಮ್ಮದೇ ಬಗೆಬಗೆ ಸ್ಟೈಲಿಶ್‌ ಫೋಟೋಶೂಟ್‌ ಮಾಡಿಸಿ ಶೇರ್‌ ಮಾಡುತ್ತಿರುತ್ತಾರೆ. ಹೀಗೆ ಹಂಚಿಕೊಂಡ ಫೋಟೋಗಳಿಗೆ, ಯೂಟ್ಯೂಬ್‌ನಲ್ಲಿನ ವ...