ಭಾರತ, ಏಪ್ರಿಲ್ 18 -- ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಕ್ಕೆ ತುತ್ತಾದರು. ಎಸ್‌ಆರ್‌ಎಚ್‌ ಇನ್ನಿಂಗ್ಸ್‌ನಲ್ಲಿ ಪಾಂಡ್ಯ ಎಸೆದ ಮೊದಲ ಓವರ್‌ನಲ್ಲಿಯೇ ಗಾಯದ ಭೀತಿ ಎದುರಿಸಿದರು. ಎರಡನೇ ಎಸೆತವನ್ನು ಎಸೆದ ನಂತರ, ಹಾರ್ದಿಕ್ ತಮ್ಮ ಫಾಲೋ-ಅಪ್‌ನಲ್ಲಿ ಎಡವಿದರು. ತಕ್ಷಣವೇ ಪಾದವನ್ನು ಹಿಡಿದು ಕೆಲಕಾಲ ಸುಧಾರಿಸಿಕೊಂಡರು. ಗಾಯದ ಭೀತಿ ಹೊರತಾಗಿಯೂ ಪಂದ್ಯದ ಕೊನೆಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸುಲಭ ಜಯ ಸಾಧಿಸಿತು.

ಹಾರ್ದಿಕ್‌ ಗಾಯಗೊಂಡಾಗ, ಎಂಐ ತಂಡದ ಫಿಸಿಯೋ ಮೈದಾನಕ್ಕೆ ಬಂದು ಹಾರ್ದಿಕ್‌ ಗಾಯವನ್ನು ಪರಿಶೀಲಿಸಿದರು. ಹೀಗಾಗಿ ಆಟವನ್ನು ಕೆಲ ಸಮಯದವರೆಗೆ ನಿಲ್ಲಿಸಬೇಕಾಯಿತು. ಹಾರ್ದಿಕ್ ಅವರು ಅಭಿಷೇಕ್ ಶರ್ಮಾಗೆ ನಿಧಾನಗತಿಯ ಎಸೆತವನ್ನು ಎಸೆದರು. ಆ ವೇಳೆ ಚೆಂಡು ಅವರ ಕೈಯಿಂದ ಜಾರಿದಂತಾಗಿ ತಕ್ಷಣ ಎಡ ಪಾದವನ್ನು ಹಿಡಿದುಕೊಂಡಂತಾಯ್ತು. ಹೀಗಾಗಿ ಕೆಲಕಾಲ ಗಾಯದ ಭೀತಿ ಎದುರಾಯ್ತು.

ಆ ಕ್ಷಣಕ್ಕೆ ...