ಭಾರತ, ಮಾರ್ಚ್ 23 -- ಹೋಳಿ ಹಬ್ಬ ಬಂತು. ಈ ವರ್ಷ ಹೋಳಿ ಹಬ್ಬವು ಬಹಳ ವಿಶೇಷವಾಗಿದೆ. ಏಕೆಂದರೆ ಮಾರ್ಚ್​ 25ರಂದು ಹೋಳಿ ಹಬ್ಬದ ದಿನ 4 ಶುಭ ಯೋಗಗಳು ರೂಪುಗೊಳ್ಳಲಿದೆ. ಅವ್ಯಾವುವೆಂದರೆ ಶಶ ಯೋಗ, ಬುಧಾದಿತ್ಯ ರಾಜಯೋಗ, ಧನಶಕ್ತಿ ಯೋಗ ಮತ್ತು ಗ್ರಹಣ ಯೋಗ. ಈ ಎಲ್ಲಾ ಯೋಗಗಳ ಸಂಯೋಜನೆಯು ಅನೇಕ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಪೈಕಿ ನಾಲ್ಕು ರಾಶಿಯವರಿಗೆ ಮಂಗಳಕರವಾಗಿದ್ದು, ಶುಭಫಲವಿದೆ.

ಬುಧಾದಿತ್ಯ ರಾಜಯೋಗವು ಮೀನ ರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಯೋಗದಿಂದ ಉಂಟಾಗುತ್ತದೆ. 30 ವರ್ಷಗಳ ನಂತರ ಕುಂಭ ರಾಶಿಯಲ್ಲಿ ಶನಿಯು ಶಶ ರಾಜಯೋಗವನ್ನು ರೂಪಿಸುತ್ತಿದ್ದಾನೆ. ಇದರೊಂದಿಗೆ ಸಂಪತ್ತು ನೀಡುವ ಶುಕ್ರ ಮತ್ತು ಮಂಗಳ ಕುಂಭ ರಾಶಿಯಲ್ಲಿ ಸಂಯೋಗವಾಗಲಿದೆ. ಇದರಿಂದ ಧನ ಶಕ್ತಿ ಯೋಗ ರೂಪುಗೊಳ್ಳಲಿದೆ. ಇವೆಲ್ಲವೂ ಸೇರಿಕೊಂಡು ಈ ಬಾರಿಯ ಹೋಳಿಯನ್ನು ಹೆಚ್ಚು ವಿಶೇಷವಾಗಿಸುತ್ತದೆ. ಇವುಗಳ ಜೊತೆಗೆ ಹೋಳಿಯಂದು ಚಂದ್ರಗ್ರಹಣ ಬಂಧಿರುವುದರಿಂದ ಗ್ರಹಣ ಯೋಗ ಕೂಡ ಉಂಟಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣ ಯೋಗವನ್ನು...