Mumbai, ಮಾರ್ಚ್ 11 -- Malhar Certification: ಮಹಾರಾಷ್ಟ್ರದ ಹಿಂದೂ ಮಾಂಸ ವ್ಯಾಪಾರಿಗಳಿಗೆ ಪ್ರತ್ಯೇಕ ಗುರುತನ್ನು ನೀಡಲು ಮಹಾರಾಷ್ಟ್ರ ಸರ್ಕಾರ 'ಮಲ್ಹಾರ್ ಪ್ರಮಾಣೀಕರಣ' ವನ್ನು ಪರಿಚಯಿಸಿದೆ. "ಇದು ಶೇಕಡಾ 100 ರಷ್ಟು ಹಿಂದೂ ಸಮುದಾಯ ನಡೆಸುತ್ತಿರುವ ಸರಿಯಾದ ಮಟನ್ ಅಂಗಡಿಗಳನ್ನು ಗುರುತಿಸಲು ಮತ್ತು ಅವು ಕಲಬೆರಕೆಯಿಂದ ಮುಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ" ಎಂದು ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ ಈ ಸಂದರ್ಭದಲ್ಲಿ ಹೇಳಿದರು.

"ಇಂದು ನಾವು ಮಹಾರಾಷ್ಟ್ರದ ಹಿಂದೂ ಸಮುದಾಯಕ್ಕಾಗಿ ಅನುಕೂಲವಾಗುವಂತಹ ಬಹುಮುಖ್ಯ ಉಪಕ್ರಮವನ್ನು ಜಾರಿಗೊಳಿಸುತ್ತಿದ್ದೇವೆ. ಈ ಕಾರ್ಯಕ್ರಮವು ಸಮಾಜದ ಹಿಂದೂ ಯುವಕರನ್ನು ಆರ್ಥಿಕವಾಗಿ ಸಬಲೀಕರಣಗೊಳ್ಳುವಂತೆ ಮಾಡುತ್ತದೆ. ಈ ಸಂದರ್ಭದಲ್ಲಿ Malharcertfication.com ಪ್ರಾರಂಭಿಸಿದ್ದೇವೆ" ಎಂದು ರಾಣೆ ಟ್ವೀಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಶೇ 100 ರಷ್ಟು ಹಿಂದೂ ನಡೆಸುವ ಮಟನ್‌ ಅಂಗಡಿಗೆ ಮಾತ್ರ ಮಲ್ಹಾರ್ ಪ್ರಮಾಣ ಪತ್ರ ನೀಡಲಾಗ...