ಭಾರತ, ಮಾರ್ಚ್ 9 -- ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಆಚರಣೆಗಳು ಹಾಗೂ ಸಂಪ್ರದಾಯಗಳಿವೆ. ಯುಗಾದಿಯೂ ಸಹ ಅನೇಕ ರೀತಿಯ ಆಚರಣೆಗಳಿಗೆ ಸಾಕ್ಷಿಯಾಗುತ್ತದೆ. ಯುಗಾದಿಯನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಹೋಳಿಗೆ ಯುಗಾದಿ ಹಬ್ಬದ ವಿಶೇಷ ಸಿಹಿ ತಿನಿಸು. ಭಾರತದ ಯಾವ ರಾಜ್ಯದಲ್ಲಿ ಯುಗಾದಿ ಹಬ್ಬವನ್ನು ಹೇಗೆ ಆಚರಿಸಲಾಗುತ್ತೆ ಎಂಬುದನ್ನು ತಿಳಿಯೋಣ.

ದಕ್ಷಿಣ ಭಾರತದ ಕರ್ನಾಟಕ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಯುಗಾದಿಯನ್ನು ಇದೇ ಹೆಸರಿನಲ್ಲಿ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಚೈತ್ರ ಮಾಸದ ಮೊದಲ ದಿನದಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತದೆ. ಮನೆಯನ್ನು ಸ್ವಚ್ಛಗೊಳಿಸುವುದು, ರಂಗೋಲಿ ಬಿಡಿಸುವದು, ಮನೆಯ ಮುಖ್ಯದ್ವಾರದಲ್ಲಿ ಮಾವಿನ ತೋರಣ ಕಟ್ಟುವುದು, ಹೊಸ ಬಟ್ಟೆ ಧರಿಸುವುದು, ಸಿಹಿ ತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವುದರೊಂದಿಗೆ ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಈ ದಿನ ವರ್ಷದ ಭವಿಷ್ಯವಾಣಿಯನ್ನು ಓದುವುದು ಶುಭಕ...