Bengaluru, ಮಾರ್ಚ್ 12 -- ಈ ವರ್ಷ ಹೋಳಿ ಹಬ್ಬವನ್ನು ಮಾರ್ಚ್ 14 ರಂದು ಆಚರಿಸಲಾಗುತ್ತದೆ. ಹೋಲಿಕಾ ದಹನವನ್ನು ಮಾರ್ಚ್ 13 ರಂದು ಆಚರಿಸಲಾಗುತ್ತದೆ. ಹೋಳಿ ಹಬ್ಬದ ಒಂದು ದಿನ ಮೊದಲು ಈ ಹೋಲಿಕಾ ದಹನ ಮಾಡಲಾಗುತ್ತದೆ. ಹೋಲಿಕಾ ದಹನ ರಾತ್ರಿ ಬಹಳ ವಿಶೇಷವಾಗಿದೆ. ಅಂದು ಮಾಡುವ ಕೆಲವು ಪರಿಹಾರಗಳಿಂದ ನೀವು ಅನೇಕ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಅನೇಕ ಜನರು ಕೆಟ್ಟ ದೃಷ್ಟಿಯನ್ನು ತೊಡೆದುಹಾಕಲು ಕೆಲವು ವಿಶೇಷ ವಿಧಾನಗಳನ್ನು ಅನುಸರಿಸುತ್ತಾರೆ.

ಇಲ್ಲಿ ನೀಡಲಾಗಿರುವ ಕೆಲವು ಪರಿಹಾರಗಳನ್ನು ಅನುಸರಿಸಿದರೆ, ಉದ್ಯೋಗ, ವ್ಯವಹಾರ ಹಾಗೂ ಸಂಪತ್ತಿನಲ್ಲಿ ಪ್ರಗತಿ ಇರುತ್ತದೆ. ಹೋಳಿ ರಾತ್ರಿಯಲ್ಲಿ ಏನು ಮಾಡಬೇಕು ಮತ್ತು ಯಾವ ಪರಿಹಾರಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಇಲ್ಲಿ ತಿಳಿಯೋಣ. ಈ ಪರಿಹಾರಗಳನ್ನು ಅನುಸರಿಸುವ ಮೂಲಕ ನೀವು ದೃಷ್ಟಿ ದೋಷದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

ಹೋಲಿಕಾ ದಹನ ದಿನದ ರಾತ್ರಿ ಕೆಟ್ಟ ದೃಷ್ಟಿಯನ್ನು ತೆಗೆದುಹಾಕಲು ಮನೆಯಲ್ಲಿ ದೃಷ್ಟಿಗಾಗಿ ಕಟ್ಟಿರುವ ವಸ್ತುಗಳನ್ನು ತೆಗೆ...