Bengaluru, ಜನವರಿ 31 -- Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ (ಜನವರಿ 30)ದ ಸಂಚಿಕೆಯಲ್ಲಿ ಹಲವು ಸಂಗತಿಗಳು ಜರುಗಿದ್ದು, ಭಾಗ್ಯಾ ಕೆಲಸಕ್ಕೇ ಕುತ್ತು ಬಂದಿದೆ. ಒಂದೆಡೆ ಭಾಗ್ಯಾ ಮನೆಯಲ್ಲಿ ಹೊಸ ಕಾರು ಬಂದ ಸಂಭ್ರಮ ನಡೆಯುತ್ತಿದೆ. ಮತ್ತೊಂದೆಡೆ ಅವಳನ್ನು ಕೆಲಸದಿಂದ ಕಿತ್ತು ಹಾಕಲು ಪ್ಲ್ಯಾನ್ ರೂಪಿಸಲಾಗಿದೆ. ಇತ್ತ ತಾಂಡವ್ ಮೇಲೆ ಶ್ರೇಷ್ಠಾಳ ನಿರ್ಲಕ್ಷ್ಯ ಮುಂದುವರಿದಿದೆ. ಭಾಗ್ಯಾ ಹಿಂದಿನ ದಿನವಷ್ಟೇ ಹೊಸ ಕಾರು ಖರೀದಿಸಿ, ಅದನ್ನು ತನ್ನ ಸಹೋದ್ಯೋಗಿಗಳ ಜತೆ ಸಂಭ್ರಮಿಸಿದ್ದಳು. ಆದರೆ ಆ ಸಂಭ್ರಮ ಹೆಚ್ಚು ಸಮಯ ಉಳಿಯುವ ಹಾಗೆ ಕಾಣಿಸುತ್ತಿಲ್ಲ. ಯಾಕೆಂದರೆ ಕನ್ನಿಕಾ ಕುತಂತ್ರ ಕೆಲಸ ಮಾಡುತ್ತಿದೆ.

ಶ್ರೇಷ್ಠಾ ಮನೆಯಲ್ಲಿ ಆಕೆಯ ಗೆಳೆಯ ಕೊಟ್ಟಿರುವ ಹೂವಿನ ಬೊಕೆಯ ಬಗ್ಗೆಯೇ ಮಾತನಾಡುತ್ತಿರುತ್ತಾಳೆ. ಜತೆಗೆ ಫೋನ್‌ನಲ್ಲೂ ಅವನ ಜತೆಯೇ ಮಾತನಾಡುತ್ತಿರುವುದು ತಾಂಡವ್‌ಗೆ ಕೋಪ ತರಿಸುತ್ತದೆ. ಬೆಳಗೆದ್ದು ಒಂದು ಲೋಟ ಕಾಫಿ ಕೇಳಿದರೂ ಅದನ್ನು ಕೊಡದೆ ಶ್ರೇಷ್ಠಾ ಜಾಗಿಂಗ್‌ಗೆ ಹೋಗುತ್ತಾಳೆ. ಹಿಂದಿನ ದಿನವೂ ...