ಭಾರತ, ಏಪ್ರಿಲ್ 7 -- ಬೆಂಗಳೂರು: ಊಟ ತಿಂಡಿ ಪದಾರ್ಥಗಳ ಸೇವನೆ ನಂತರ ಹೋಟೆಲ್‌ಗಳಲ್ಲಿ ಬಿಲ್‌ನ ಜತೆ ಸೇವಾ ಶುಲ್ಕವನ್ನು ಸೇರ್ಪಡೆ ಮಾಡಲಾಗುತ್ತಿತ್ತು. ಆದರೆ ಇತ್ತೀಚೆಗೆ ದೆಹಲಿ ಹೈಕೋರ್ಟ್‌ ಈ ಸೇವಾ ಶುಲ್ಕ ಕಡ್ಡಾಯ ಅಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಜತೆಗೆ ಸೇವಾ ಶುಲ್ಕವನ್ನು ಕಡ್ಡಾಯವಾಗಿ ಸಂಗ್ರಹಿಸುವುದು ಕಾನೂನುಬಾಹಿರ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಗ್ರಾಹಕರು ಇಚ್ಚಿಸಿದಲ್ಲಿ ಸ್ವಯಂ ಪ್ರೇರಣೆಯಿಂದ ಟಿಪ್ಸ್‌ ನೀಡಬಹುದೇ ಹೊರತು ಹೋಟೆಲ್‌ಗಳು ಸೇವಾ ಶುಲ್ಕವನ್ನು ಸಂಗ್ರಹಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಸೇವಾ ಶುಲ್ಕ ಎಂದರೆ ಸರ್ಕಾರಕ್ಕೆ ಕಟ್ಟುವ ತೆರಿಗೆ ಎಂದೂ ಕೆಲವರು ಭಾವಿಸುತ್ತಾರೆ. ವಾಸ್ತವದಲ್ಲಿ ಈ ಹಣ ಸರ್ಕಾರಕ್ಕೆ ಹೋಗುವುದೇ ಇಲ್ಲ. ಬದಲಾಗಿ ಹೋಟೆಲ್‌ನವರಿಗೆ ಉಳಿದುಕೊಳ್ಳುತ್ತದೆ. ಕೆಲವು ಹೋಟೆಲ್‌ಗಳಲ್ಲಿ ಈ ಹಣವನ್ನು ನೌಕರರ ನಡುವೆ ಸಮಾನವಾಗಿ ಹಂಚಿದರೆ ಇನ್ನೂ ಕೆಲವು ಹೋಟೆಲ್‌ ಮಾಲೀಕರು ಹೋಟೆಲ್‌ ವೆಚ್ಚಕ್ಕೆ ಉಳಿಸಿಕೊಂಡು ಉಳಿದ ಹಣವನ್ನು ನೌಕರರಿಗೆ ವಿತರಣೆ ಮಾಡುತ್ತಾರೆ.

ಸೇವಾ ಶುಲ್ಕ ಕು...