ಭಾರತ, ಜುಲೈ 24 -- ಬಹುನಿರೀಕ್ಷಿತ ಹೋಂಡಾ ಸಿಬಿ 125 ಹಾರ್ನೆಟ್ (Honda CB 125 Hornet) ಬೈಕ್ ಅನಾವರಣಗೊಂಡಿದೆ. ಈ ಹೊಸ ಬೈಕ್, ಕಂಪನಿಯ 125 ಸಿಸಿ ಮೋಟಾರ್ ಸೈಕಲ್ ಸೆಗ್‌ಮೆಂಟಿನಲ್ಲಿ ಹೋಂಡಾ ಎಸ್ ಪಿ 125 ಬೈಕಿಗೆ ಸೇರುತ್ತದೆ. ಯುವಕರನ್ನು ಗುರಿಯಾಗಿಸಿಕೊಂಡು ಸಿಬಿ 12 ಹಾರ್ನೆಟ್ ಅನ್ನು ರೂಪಿಸಲಾಗಿದ್ದು, ಸಿಬಿ ಮತ್ತು ಹಾರ್ನೆಟ್ ಬ್ರಾಂಡ್‌ನ ಪರಂಪರೆಯನ್ನು ಸಂಯೋಜಿಸುತ್ತದೆ.

ಈ ಹೊಸ ಬೈಕ್‌ ಖರೀದಿಸಲು ಆಸಕ್ತಿ ಇರುವವರಿಗಾಗಿ, ಆಗಸ್ಟ್ 1ರಿಂದ ಬುಕಿಂಗ್ ಆರಂಭವಾಗಲಿದೆ. ಹೊಸ ಸಿಬಿ 125 ಹಾರ್ನೆಟ್ ಬೈಕ್ 125 ಸಿಸಿ ಸೆಗ್‌ಮೆಂಟಿನಲ್ಲಿ ಹೊಸ ಗ್ರಾಹಕರನ್ನು ಸೇರಿಸಲಿದೆ ಎಂದು ಹೋಂಡಾ ಹೇಳಿಕೊಂಡಿದೆ.

ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಯೋಗೇಶ್ ಮಾಥುರ್ ಮಾತನಾಡಿ, ಸಿಬಿ 125 ಹಾರ್ನೆಟ್ ಬೈಕ್‌ ತನ್ನ ಸುಧಾರಿತ ಸ್ಟೈಲಿಂಗ್, ಸೆಗ್ಮೆಂಟ್-ಫಸ್ಟ್ ವೈಶಿಷ್ಟ್ಯಗಳೊಂದಿಗೆ 125 ಸಿಸಿ ಪ್ರೀಮಿಯಂ ಕಮ್ಯೂಟರ್ ಸ್ಪೇಸ್ ಅನ್ನು ಮರುವ್ಯಾಖ್ಯಾನಿಸಲು ಸಜ್ಜಾಗಿದೆ.

ಹೋಂಡಾ ಸಿಬಿ...