ಭಾರತ, ಏಪ್ರಿಲ್ 1 -- ಬೆಂಗಳೂರು: ಕಳೆದ ವರ್ಷ ಗಮನ ಸೆಳೆದ ಕನ್ನಡ ಚಿತ್ರಗಳ ಪೈಕಿ 'ಬ್ಲಿಂಕ್‍' ಸಹ ಒಂದು. ಶ್ರೀನಿಧಿ ಬೆಂಗಳೂರು ನಿರ್ದೇಶನದ ಈ ಸೈನ್ಸ್ ಫಿಕ್ಷನ್‍ ಚಿತ್ರವು ಕಳೆದ ವರ್ಷ ಮಾರ್ಚ್ 08ರಂದು ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಆ ನಂತರ ಶ್ರೀನಿಧಿ ಸುದ್ದಿಯೇ ಇರಲಿಲ್ಲ. ಈಗ ಅವರು ಸದ್ದಿಲ್ಲದೆ ಒಂದು ಹೊಸ ಚಿತ್ರದೊಂದಿಗೆ ಬರುತ್ತಿದ್ದು, ಈಗಾಗಲೇ ಶೇ.70ರಷ್ಟು ಚಿತ್ರೀಕರಣವನ್ನೂ ಮುಗಿಸಿದ್ದಾರೆ.

ಶ್ರೀನಿಧಿ ಹೊಸ ಚಿತ್ರವು Found Footage ಜಾನರ್‌ನ ಒಂದು ಚಿತ್ರ. ಏನಿದು Found Footage ಎಂಬ ಪ್ರಶ್ನೆ ಬರಬಹುದು. ಉದಾಹರಣೆಗೆ ಹೇಳಬೇಕೆಂದರೆ '6-5=2' ತರಹದ ಚಿತ್ರ. ಇಲ್ಲಿ ಕ್ಯಾಮೆರಾನೇ ಪ್ರಮುಖವಾದ ಪಾತ್ರ ವಹಿಸುತ್ತದೆ. ಒಂದು ಸ್ಥಳದಲ್ಲಿ ಚಿತ್ರವಿಚಿತ್ರ ಘಟನೆಗಳು ನಡೆದಿರುತ್ತವೆ. ಅಲ್ಲಿ ಏನು ಆಗಿರುತ್ತದೆ ಎಂಬುದನ್ನು ಹೇಳುವುದಕ್ಕೆ ಯಾರೂ ಇರುವುದಿಲ್ಲ. ಅಲ್ಲಿ ಸಿಗುವ ಒಂದು ಕ್ಯಾಮೆರಾ, ಅಲ್ಲಿ ಏನೇನಾಯಿತು ಎಂಬ ಕಥೆಯನ್ನು ಹೇಳುತ್ತಾ ಹೋಗುತ್ತದೆ. ಇದು ಸಹ ಒಂದು ಶೈಲಿಯ ಚಿತ್ರವಾಗಿದ್ದು,...