ಭಾರತ, ಏಪ್ರಿಲ್ 12 -- ಪ್ರತಿನಿತ್ಯ ತಮ್ಮ ಕೆಲಸಕ್ಕಾಗಿ ಒಂದು ಕಡೆಯಿಂದ ಇನ್ನೊಂದು ಕಡೆ ಸಾಗುವ ಸಾಕಷ್ಟು ಮೆಟ್ರೋ ಪ್ರಯಾಣಿಕರಿದ್ದಾರೆ. ಆದರೆ, ಹಲವು ಜನರಿಗೆ ಕಾಡುವ ಸಮಸ್ಯೆ ಎಂದರೆ ಮೆಟ್ರೋ ಬಳಿ ಪಾರ್ಕಿಂಗ್ ಸಮಸ್ಯೆ. ತಮ್ಮ ನಿವಾಸದಿಂದ ಮೆಟ್ರೋ ನಿಲ್ದಾಣದವರೆಗೆ ತಮ್ಮ ಸ್ವಂತ ವಾಹನದ ಮೂಲಕ ಬಂದು, ನಂತರ ಮೆಟ್ರೋ ಹತ್ತಿ ಸಾಗುವ ಹಲವರಿದ್ದಾರೆ. ಆದರೆ ಕೆಲ ಮೆಟ್ರೋ ನಿಲ್ದಾಣಗಳಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಇದರಿಂದಾಗಿ ಸಾಕಷ್ಟು ಜನರು ಪ್ರತಿನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಮೆಟ್ರೋ ನಿಲ್ದಾಣಗಳ ಸುತ್ತಲೂ ಸಾಕಷ್ಟು ವಾಹನಗಳು ಅಸ್ಥವ್ಯಸ್ಥವಾಗಿ ನಿಂತಿರುವುದನ್ನು ಸಹ ಎಲ್ಲೆಡೆ ಗಮನಿಸಬಹುದು.

ಈ ಎಲ್ಲ ಸಮಸ್ಯೆಗಳನ್ನು ಸಾಕಷ್ಟು ಜನರು ಹೇಳಿಕೊಂಡಿದ್ದು, ನಿಜ ಸ್ಥಿತಿಯ ಅರಿವಾದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಆಯ್ದ ಸ್ಥಳಗಳಲ್ಲಿ ಬಹು ಮಹಡಿಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಯೋಚಿಸುತ್ತಿದೆ. ಅನೇಕ ಪ್ರಯಾಣಿಕರು ಮತ್ತು ಇತರರು ತಮ್ಮ ವಾಹನಗಳನ್ನು ಮೆಟ್ರೋ ನಿಲ್ದಾಣಗಳ ಬಳಿಯ ರಸ್ತೆಗಳಲ್...