Bengaluru, ಏಪ್ರಿಲ್ 25 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಏಪ್ರಿಲ್ 24ರ ಸಂಚಿಕೆಯಲ್ಲಿ ಹೊಸ ಮನೆ ನಿರ್ಮಾಣ ಕುರಿತಂತೆ ಸಂತೋಷ್ ಮತ್ತು ಹರೀಶನ ಮಧ್ಯೆ ಕಲಹ ಉಂಟಾಗಿದೆ. ಮನೆ ನಿರ್ಮಾಣ ಮಾಡುವ ಬಗ್ಗೆ ಸಂತೋಷನ ಬಳಿ ಬಗೆಬಗೆಯಾಗಿ ಹರೀಶ ವಿಚಾರಿಸಿದ್ದಾನೆ. ಆಗ ಬೇರೆ ವಿಧಿಯಿಲ್ಲದೆ, ಅನಿವಾರ್ಯವಾಗಿ ಸಂತೋಷ್, ಹೌದು ನಾನು ಹೊಸ ಮನೆ ಕಟ್ಟಿಸುತ್ತಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಆದರೆ ಈ ವಿಚಾರ ಮನೆಯವರಿಗೆ ತಿಳಿದಿಲ್ಲ ಎಂದು ಕೂಡ ಹೇಳಿದ್ದಾನೆ. ಇದರಿಂದ ಅಣ್ಣ ಸಂತೋಷ್‌ನನ್ನು ಮಾತಿನಲ್ಲೇ ಕಟ್ಟಿ ಹಾಕಲು ಹರೀಶನಿಗೆ ಒಳ್ಳೆಯ ಅಸ್ತ್ರ ಸಿಕ್ಕಂತಾಗಿದೆ. ಅವನು ಇದೇ ವಿಚಾರ ಇಟ್ಟುಕೊಂಡು ಅಣ್ಣ ಸಂತೋಷನನ್ನು ಬ್ಲ್ಯಾಕ್‌ಮೇಲ್ ಮಾಡಲು ಶುರು ಮಾಡಿದ್ದಾನೆ. ಸಂತೋಷ್‌ ಕೂಡ ಹರೀಶನ ಮಾತುಗಳಿಗೆ ಹೆದರಿ, ಬಾಯಿಮುಚ್ಚಿಕೊಂಡಿದ್ದಾನೆ.

ನೀನು ಮನೆಯವರಿಗೆ ಮೋಸ ಮಾಡಿದ್ದಿ, ನಿನ್ನ ಮಾತು ನಾವೆಲ್ಲ ನಂಬಿದ್ದೆವು, ಆದರೆ ನೀನು ಮಾತ್ರ ಗುಟ್ಟಾಗಿ ಮನೆ ಕಟ್ಟಿಸಿದ್ದಿ, ನಮ್ಮ ಅಪ್ಪ ಅಮ್ಮ ಇಲ್ಲಿ ನಮಗಾಗಿ ಇಷ...