Bengaluru, ಫೆಬ್ರವರಿ 26 -- Alpha Men loves violence: ಸ್ಯಾಂಡಲ್‌ವುಡ್‌ನಲ್ಲಿ ಈಗಾಗಲೇ ಗೀತ ಮತ್ತು ಹೊಯ್ಸಳ ಸಿನಿಮಾ ಮೂಲಕ ತಮ್ಮ ತಾಕತ್ತೇನು ಎಂಬುದನ್ನು ತೋರಿಸಿರುವ ನಿರ್ದೇಶಕ ವಿಜಯ್‌, ಇದೀಗ ಇನ್ನೊಂದು ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಹೊಸ ನಾಯಕನನ್ನು ಚಂದನವನಕ್ಕೆ ಕರೆತಂದಿದ್ದಾರೆ. ಇಂದು ಶಿವರಾತ್ರಿ ಹಬ್ಬದ ಪ್ರಯುಕ್ತ ಸಿನಿಮಾದ ಶೀರ್ಷಿಕೆ ಮತ್ತು ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಚಿತ್ರಕ್ಕೆ "ಆಲ್ಫಾ; ಮೆನ್‌ ಲವ್‌ ವೈಲೆನ್ಸ್‌" ಎಂಬ ಶೀರ್ಷಿಕೆ ಇಡಲಾಗಿದೆ.

'ಆಲ್ಫಾ; ಮೆನ್ ಲವ್ ವೈಲೆನ್ಸ್' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಹೊಸ ಹೀರೋ ಹೇಮಂತ್ ಕುಮಾರ್ ಎಂಟ್ರಿಕೊಟ್ಟಿದ್ದಾರೆ. ಮಾಸ್ ಸಿನಿಮಾ ಮೂಲಕ ಹೇಮಂತ್ ಕನ್ನಡ ಚಿತ್ರಾಭಿಮಾನಿಗಳ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಶಿವರಾತ್ರಿ ಪ್ರಯುಕ್ತ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದೆ ಸಿನಿಮಾತಂಡ. ಈ ಸಿನಿಮಾದಲ್ಲಿ ಆಕ್ಷನ್ ಜೊತೆಗೆ ಅಪ್ಪ ಮತ್ತು ಮಗನ ಬಾಂಡಿಂಗ್‌ ಸಹ ಅಷ್ಟೇ ಹೈಲೆಟ್. ಈ ಮೊದಲು ಗೀತ ಮತ್ತು ಹೊಯ್ಸಳ ಸಿನಿಮಾಗಳನ್ನು ನಿರ್ದೇಶನ ಮ...