Bengaluru, ಏಪ್ರಿಲ್ 21 -- ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದರಲ್ಲೂ ಹೊಟ್ಟೆ ಕೊಬ್ಬಿನಿಂದ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ. ಒಮ್ಮೆ ಹೊಟ್ಟೆಯಲ್ಲಿ ಬೊಜ್ಜು ಬಂದರೆ ಮತ್ತೆ ಅದನ್ನು ಹೋಗಲಾಡಿಸುವುದು ಬಹಳ ಕಷ್ಟ ಎಂದು ಎಲ್ಲರೂ ಹೇಳುತ್ತಾರೆ. ಆನ್ಲೈನ್ ಫಿಟ್ನೆಸ್ ತರಬೇತುದಾರ ಡಾನ್ ಗೋ ಎಂಬುವವರು ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳುವುದು ಹೇಗೆ ಎಂಬ ಬಗ್ಗೆ ಸಲಹೆಯನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ವಿವರ.

ಮದ್ಯಪಾನ ಮಾಡುವುದನ್ನು ನಿಲ್ಲಿಸಿ: ಆಲ್ಕೋಹಾಲ್ ಹಸಿವು ಮತ್ತು ಒತ್ತಡವನ್ನು ನಿಯಂತ್ರಿಸುವ ಹಾರ್ಮೋನುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಹೆಚ್ಚಿನ ಕ್ಯಾಲೊರಿಗಳನ್ನು ಸಹ ಹೊಂದಿದೆ. ಇದು ಕಿಬ್ಬೊಟ್ಟೆಯ ಕೊಬ್ಬನ್ನು ಹೆಚ್ಚಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಕಾರ್ಬೋಹೈಡ್ರೇಟ್ ಸೇವನೆಯನ್ನು ನಿಮ್ಮ ಚಟುವಟಿಕೆಯ ಮಟ್ಟಕ್ಕೆ ಹೊಂದಿಸಿ: ಕಾರ್ಬೋಹೈಡ್ರೇಟ್ ಕಾರ್ಯಕ್ಷಮತೆಗೆ ಇಂಧನವಾಗಿದೆ. ಕುಳಿತುಕೊಂಡು ಕೆಲಸ ಮಾಡುವಿರಾದರೆ ಅವುಗಳನ್ನು ಕ...