ಭಾರತ, ಏಪ್ರಿಲ್ 16 -- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 77 ರನ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 93* ರನ್ ಗಳಿಸಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ರಾಹುಲ್ ಅವರನ್ನು ಎತ್ತಿ ಮೆರೆಸಿದ್ದ ಇದೇ ಅಭಿಮಾನಿಗಳು 2025ರ ಇಂಡಿಯನ್ ಪ್ರೀಮಿಯರ್ ಲೀಗ್​ನ 32ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಿದ ರೀತಿಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಕೆಎಲ್ ರಾಹುಲ್ ಅವರಿಂದ ಸರಿಯಾದ ಟೆಸ್ಟ್ ಇನ್ನಿಂಗ್ಸ್ ಎಂದು ಕಿಡಿಕಾರಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಪರ ಆಡುತ್ತಿದ್ದ ಆಟವನ್ನೇ ಇಲ್ಲೂ ಮುಂದುವರೆಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ರಾಜಸ್ಥಾನ್ ವಿರುದ್ಧದ ಇನ್ನಿಂಗ್ಸ್ ಪ್ರಸಕ್ತ ಆವೃತ್ತಿಯಲ್ಲಿ ರಾಹುಲ್ ಅವರ ಕಳೆದ ಇನ್ನಿಂಗ್ಸ್​​ಗಳಿಗೆ ವ್ಯತಿರಿಕ್ತವಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ 34/2ಕ್ಕೆ ಕುಸಿಯುತ್ತಿದ್ದಂತೆ ಕೆಎಲ್, ಎಚ್ಚರಿಕೆಯ ಮತ್ತು ನಿಧಾನಗತಿಯ ಆಟಕ್ಕೆ ಒತ್ತುಕೊಟ್ಟರು. 32 ಎಸೆತಗಳಲ್ಲಿ 38 ರನ್ ಗಳಿಸಿದ ಕರ್ನ...