ಭಾರತ, ಫೆಬ್ರವರಿ 13 -- ಬೆಂಗಳೂರು: ಮುತ್ತಿನ ನಗರಿ ಹೈದರಾಬಾದ್ ಮತ್ತು ಉದ್ಯಾನ ನಗರಿ ಬೆಂಗಳೂರು ನಡುವೆ ದಿನಂಪ್ರತಿ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ಎರಡು ನಗರಗಳ ಪ್ರಯಾಣದ ಅಂತರ 618 ಕಿ.ಮೀ. ಸ್ವಂತ ವಾಹನ ಹೊರತುಪಡಿಸಿದರೆ ಬಸ್‌ನಲ್ಲಿ 6ರಿಂದ 10 ಗಂಟೆ ಮತ್ತು ರೈಲು ಪ್ರಯಾಣಕ್ಕೆ 12 ಗಂಟೆಗಳು ಬೇಕಾಗುತ್ತವೆ. ಎರಡೂ ನಗರಗಳ ನಡುವೆ ಸಾಕಷ್ಟು ವ್ಯವಹಾರಗಳಿದ್ದು, ಹೈಸ್ಪೀಡ್‌ ಅಥವಾ ಬುಲೆಟ್‌ ಟ್ರೈನ್‌ಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಕೇಂದ್ರ ಸರ್ಕಾರ ಎರಡು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಪ್ರಸ್ತಾಪಿಸಿದೆ. ಹೈದರಾಬಾದ್‌ನಿಂದ ಬೆಂಗಳೂರು ಮತ್ತು ಚೆನ್ನೈಗೆ ಹೈಸ್ಪೀಡ್‌ ರೈಲು ಮಾರ್ಗ ನಿರ್ಮಿಸಲು ಮುಂದಾಗಿದೆ. ಒಂದು ವೇಳೆ ಇದು ಸಾಕಾರವಾದರೆ 2 ಗಂಟೆಗಳಲ್ಲಿ ಹೈದರಾಬಾದ್‌ನಿಂದ ಚೆನ್ನೈ ಅಥವಾ ಬೆಂಗಳೂರಿಗೆ ತಲುಪಬಹುದಾಗಿದೆ. ಇದು ವಿಮಾನ ಪ್ರಯಾಣದ ಸಮಯಕ್ಕೆ ಸಮನಾಗಲಿದೆ.

ಈ ಯೋಜನೆ ಇನ್ನೂ ಸಮೀಕ್ಷೆಯ ಹಂತದಲ್ಲೇ ಇದೆ. ಮುಂಬೈ-ಅಹಮದಾಬಾದ್‌ ನಡುವಿನ ಬುಲೆಟ್‌ ಟ್ರೈನ್‌ ಗಂಟೆಗೆ 320 ಕಿಮೀ ವೇಗದಲ್ಲಿ ಸಂಚರಿಸಲಿದ್ದು, ಹೈ...