Bangalore, ಫೆಬ್ರವರಿ 3 -- ಬೆಂಗಳೂರು: ಆಸ್ತಿ ವರ್ಗಾವಣೆ ವಿಚಾರದಲ್ಲ ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪೊಂದನ್ನು ಪ್ರಕಟಿಸಿದೆ. ಹಿರಿಯ ನಾಗರಿಕರ ಕಾಯ್ದೆಯಡಿ ಆಸ್ತಿ ವರ್ಗಾವಣೆ ರದ್ದು ಬಯಸಿ ಮಕ್ಕಳು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ಮಹತ್ವದ ತೀರ್ಪಿನಲ್ಲಿ ಉಲ್ಲೇಖಿಸಿದೆ. ತಂದೆ ತನ್ನ ಸಹೋದರನಿಗೆ ಮಾಡಿದ್ದ ದಾನ ಪತ್ರವನ್ನು ರದ್ದು ಪಡಿಸುವ ವಿಚಾರದಲ್ಲಿ ಮತ್ತೊಬ್ಬ ಪುತ್ರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗಿಯ ನ್ಯಾಯ ಪೀಠವು, ದಾನ ಪತ್ರದ ಮೂಲಕ ತಂದೆ ತನ್ನ ಆಸ್ತಿಯನ್ನು ವರ್ಗಾವಣೆ ಮಾಡಿದ್ದನ್ನು ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣಾ ಮತ್ತು ಕ್ಷೇಮಾಭಿವೃದ್ಧಿ ಕಾಯಿದೆಯ ಸೆಕ್ಷನ್ 16 ಅಡಿ ಅರ್ಜಿ ಸಲ್ಲಿಸಲಾಗದು ಎಂದು ಹೈಕೋರ್ಟ್‌ ತಿಳಿಸಿದೆ ಎಂದು ಕಾನೂನು ಪತ್ರಿಕೆ ಲಾಗೈಡ್‌ ವರದಿ ಮಾಡಿದೆ

2019ರಲ್ಲಿ ಬೆಂಗಳೂರಿನ ಕೃಷ್ಣ ಎಂಬವರು ತಮ್ಮ ಆಸ್ತಿಯಲ್ಲಿ ...