ಭಾರತ, ಜನವರಿ 29 -- Mahakumbh Stampede: ಇಂದು ಮೌನಿ ಅಮವಾಸ್ಯ ಕಾರಣ ಮಹಾ ಕುಂಭ ಮೇಳದ ಸಂದರ್ಭದಲ್ಲಿ ಲಕ್ಷಾಂತರ ಯಾತ್ರಾರ್ಥಿಗಳು ಪವಿತ್ರ ಸ್ನಾನಕ್ಕಾಗಿ ಜಮಾಯಿಸಿದ್ದರಿಂದ ಸಂಗಮದಲ್ಲಿ ಕಾಲ್ತುಳಿತ ಸಂಭವಿಸಿದ್ದು, 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸುಮಾರು 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಈ ಕಾಲ್ತುಳಿತ ದುರಂತಕ್ಕೆ ಕಾರಣವೇನು? ಸಂಗಮದ ಅವ್ಯವಸ್ಥೆ ಕುರಿತು ಭಯಾನಕ ಮಾಹಿತಿಯನ್ನು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.

ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್​ ಹಾಗೂ ಪ್ರತ್ಯಕ್ಷದರ್ಶಿ ವಿವೇಕ್ ಮಿಶ್ರಾ ಅವರು ಪ್ರಯಾಗ್​ರಾಜ್ ಸಂಗಮದಲ್ಲಿರುವ ಅವ್ಯವಸ್ಥೆಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. 'ಮುಂಜಾನೆ 2 ಗಂಟೆಗೆ 30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಹೆಚ್ಚಿನ ಸಂಖ್ಯೆಯ ಯಾತ್ರಾರ್ಥಿಗಳು ಪವಿತ್ರ ಸ್ನಾನಕ್ಕಾಗಿ ಜಮಾಯಿಸಿದ್ದರಿಂದ ಈ ಘೋರ ದುರಂತ ನಡೆಯಿತು' ಎಂದು ಅವರು ಹೇಳಿದ್ದಾರೆ. 'ಒಂದೇ ಸಮನೆ ಜನರು ನುಗ್ಗಿದ ಕಾರಣ ಪವಿತ್ರ ಸ್ನಾನದ ಬಳಿಕ ಎಲ...