ಭಾರತ, ಏಪ್ರಿಲ್ 20 -- ರಸ್ತೆ ನಿಯಮಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಜನರು ಎಚ್ಚರವಹಿಸುವುದು ಕಡಿಮೆ. ಟ್ರಾಫಿಕ್‌ ನಿಯಮಗಳನ್ನು ಸರಿಯಾಗಿ ಅನುಸರಿಸುವ ಜೊತೆಗೆ ಸುರಕ್ಷತಾ ನಿಯಮಗನ್ನು ಪಾಲಿಸಿದರೆ ಅಪಘಾತಗಳು ಕಡಿಮೆಯಾಗುವ ಜೊತೆಗೆ ಅಮೂಲ್ಯ ಜೀವಗಳು ಉಳಿಯುತ್ತವೆ. ಭಾರತದಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸುವುದು ಕಡ್ಡಾಯ. ಮುಂಬದಿ ಮಾತ್ರವಲ್ಲದೆ ಹಿಂಬದಿ ಸವಾರರು ಕೂಡಾ ಗಟ್ಟಿಯಾದ ಹೆಲ್ಮೆಟ್‌ ಧರಿಸಬೇಕು. ಇದು ಸವಾರರ ಸುರಕ್ಷತೆ ದೃಷ್ಟಿಯಿಂದ ಜಾರಿಗೆ ತರಲಾದ ನಿಯಮ. ಆದರೆ, ಇದನ್ನು ಶಿಸ್ತಿನಿಂದ ಪಾಲಿಸುವವರು ವಿರಳ.

ಹೆಲ್ಮೆಟ್‌ ಅನ್ನು ತಮ್ಮ ಜೀವರಕ್ಷಣೆಗೆಂದು ಧರಿಸುವವರಿಗಿಂತ, ಟ್ರಾಫಿಕ್ ಪೊಲೀಸರ ಕೈಯಿಂದ‌ ಫೈನ್‌ ತಪ್ಪಿಸುವುದಕ್ಕೆ ಧರಿಸುವವರೇ ಹೆಚ್ಚು. ಹೀಗಾಗಿ ಕಾಟಾಚಾರಕ್ಕೆ ಸಣ್ಣ ಗಾತ್ರದ ಗಟ್ಟಿಯಿಲ್ಲದ ಹೆಲ್ಮೆಟ್‌ ಧರಿಸಿ ಪ್ರಯಾಣ ಮಾಡುತ್ತಾರೆ. ಅಪಘಾತವಾದ ಸಮಯದಲ್ಲಿ ಅದು ಆ ಸವಾರನ ಜೀವರಕ್ಷಿಸುವಷ್ಟು ಗಟ್ಟಿ ಇರುವುದಿಲ್ಲ. ಆದರೂ, ಜನರು ಮಾತ್ರ ತಮ್ಮ ಜೀವದ ಮೌಲ್ಯದ ಅರಿವಿಲ್ಲದೆ ಬೈಕ್‌ ಸವಾರಿ ...