ಭಾರತ, ಏಪ್ರಿಲ್ 1 -- ಹೆಣ್ಣಿಗೆ ತಾಯ್ತನ ಒಂದು ತಪಸ್ಸು. ತಾಯಿಯಾದ ನಂತರ ಹೆಣ್ಣು ಅನುಭವಿಸುವ ಖುಷಿ ಅಷ್ಟಿಷ್ಟಲ್ಲ. ಬಹುತೇಕ ಹೆಣ್ಣುಮಕ್ಕಳ ಜೀವನಶೈಲಿ ಒಂದು ಮಗು ಆದ ನಂತರ ಸ್ವಲ್ಪವಾದರೂ ಬದಲಾವಣೆಯಾಗುತ್ತದೆ. ಇಷ್ಟೇ ಅಲ್ಲ, ಮಾನಸಿಕವಾಗಿಯೂ ಕೆಲವೊಂದು ಬದಲಾವಣೆಯ ಅರಿವು ಆಗಬಹುದು. ನೀವು ಅಥವಾ ನಿಮ್ಮವರು ಇತ್ತೀಚೆಗೆ ತಾಯಿಯಾಗಿದ್ದರೆ, ನಿಮಗೆ ಅರಿವಿಲ್ಲದೆ ಆಗಿರುವ ಕೆಲವೊಂದು ಬದಲಾವಣೆಗಳಿರಬಹುದು. ನೀವು ಆಗಾಗ ಕೆಲವೊಂದು ಸಣ್ಣ ಮತ್ತು ದೊಡ್ಡ ವಿಷಯಗಳನ್ನು ಕೂಡಾ ಮರೆಯಬಹುದು. ಹಾಗಂತಾ ಈ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ನೀವು ಮಾತ್ರವಲ್ಲ, ತಾಯ್ತನದ ಖುಷಿ ಅನುಭವಿಸಿದ ನಿಮ್ಮಂತಹ ಲಕ್ಷಾಂತರ ಮಹಿಳೆಯರು ಮಗು ಕೈಸೇರಿದ ಬಳಿಕ ಈ ಮರೆವಿನ ಸಮಸ್ಯೆ ಎದುರಿಸುತ್ತಿರುತ್ತಾರೆ.

ಈ ಮರೆವಿಗೆ ನಿಮ್ಮ ಸಮಸ್ಯೆ ಅಲ್ಲ. ಇದನ್ನು ಪ್ರೆಗ್ನೆನ್ಸಿ ಬ್ರೈನ್ (pregnancy brain), ಮಾಮ್ನೇಷಿಯಾ (Momnesia) ಅಥವಾ ಬೇಬಿ ಬ್ರೈನ್‌ (baby brain) ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಹೆರಿಗೆಯ ನಂತರ, ಬಾಣಂತಿಯು ತಮ್ಮ ಮಗುವಿನ ಬಗ್ಗೆಯೇ ಹೆಚ್...