Bengaluru, ಜೂನ್ 11 -- ಅಂಗೈಯಲ್ಲಿನ ರೇಖೆಗಳನ್ನು ಆಧರಿಸಿ ಮನುಷ್ಯನ ಜೀವನದಲ್ಲಿನ ಲಾಭಗಳು, ಸವಾಲುಗಳನ್ನು ತಿಳಿಯಬಹುದು. ಆತನಿಗೆ ಅದೃಷ್ಟ ಇದೆಯಾ, ಇಲ್ಲವೇ ಕಷ್ಟಗಳನ್ನು ಎದುರಿಸಬೇಕಾಗುತ್ತದೆಯೇ ಎಂಬುದನ್ನು ಕೂಡ ಹಸ್ತ ಸಾಮುದ್ರಿಕದಲ್ಲಿ ವಿವರಿಸಲಾಗುತ್ತದೆ. ಕೆಲವರ ಹೆಬ್ಬೆರಳಿನಲ್ಲಿ ಹುಣ್ಣಿಮೆಯ ಚಂದ್ರನ ಆಕಾರದಲ್ಲಿ ವೃತ್ತಾಕಾರ ಚಿಹ್ನೆ ಇರುತ್ತದೆ. ಇದು ಗಾಢವಾಗಿರಲಿ ಅಥವಾ ಸೂಕ್ಷ್ಮವಾಗಿರಲಿ ದೊರೆಯುವ ಫಲಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗಾಢವಾಗಿದ್ದಲ್ಲಿ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ಆದರೆ ಖಚಿತ ಯಶಸ್ಸು ದೊರೆಯುತ್ತದೆ. ಹಠದ ಸ್ವಭಾವ ಇರುತ್ತದೆ. ಚಿಹ್ನೆಯು ಕಣ್ಣಿಗೆ ಸುಲಭವಾಗಿ ಕಾಣದೆ ಹೋದಲ್ಲಿ ದೊರೆಯುವ ಫಲಿತಾಂಶಗಳು ಅನುಕೂಲಕಾರಿಯಾಗುತ್ತವೆ. ಆದರೆ ಮನದಲ್ಲಿ ನಂಬಿಕೆ ಇರುವುದಿಲ್ಲ.

ಮನದಲ್ಲಿನ ಆಸೆ ಆಕಾಂಕ್ಷೆಗಳು ಕೈಗೂಡಲು ಕೆಲಸ ಕಾರ್ಯದಲ್ಲಿ ತೊಡಗುವಿರಿ. ಇವರ ಕಾರ್ಯನಿರ್ವಹಣೆಯನ್ನು ಎಲ್ಲರೂ ಮೆಚ್ಚುತ್ತಾರೆ. ಎಲ್ಲರ ಜೊತೆ ತಮ್ಮ ಮನದ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಆದರೆ ಕೆಲವ...