Bengaluru, ಜೂನ್ 11 -- ಕೆಲವರ ಹೆಬ್ಬೆರಳಲ್ಲಿ ಸುರುಳಿಯಾಕಾರವು ಕಂಡುಬರುತ್ತದೆ. ಹೆಬ್ಬೆರಳಿನ ಮೊದಲ ಭಾಗವನ್ನು ಇದು ಹೆಚ್ಚು ಆಕ್ರಮಿಸಿರುತ್ತದೆ. ಇದಕ್ಕೆ ಹೊಂದಿಕೊಂಡಂತೆ ಒಂದು ಅಥವಾ ಎರಡು ಸಣ್ಣದಾದ ಸುರುಳಿಯ ಆಕಾರಗಳು ಅದರ ಅಕ್ಕ ಪಕ್ಕದಲ್ಲಿ ಇರುತ್ತದೆ. ಚಿಕ್ಕ ಸುರುಳಿಗಳು ಹೆಬ್ಬೆರಳಿನ ಮೊದಲ ಭಾಗದ ಬುಡದವರೆಗೂ ಜಾರಿದಂತೆ ಕಂಡುಬರುತ್ತದೆ. ಇವುಗಳು ಬರಿಗಣ್ಣಿಗೆ ಕಾಣುವಂತೆ ಇದ್ದಲ್ಲಿ ಇವರು ಆರಂಭಿಸುವ ಕೆಲಸಗಳನ್ನು ಶತಾಯುಗತಾಯ ಪ್ರಯತ್ನಿಸಿ ಪೂರ್ಣಗೊಳಿಸುತ್ತಾರೆ. ಆದರೆ ಈ ಚಿಹ್ನೆಗಳು ಬರಿಗಣ್ಣಿಗೆ ಕಾಣದಂತೆ ಇದ್ದಲ್ಲಿ ಇವರ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಪೂರ್ಣಗೊಳ್ಳುತ್ತವೆ. ಬೇಸರದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ.

ಇವರು ಸ್ಥಿರವಾದ ಮನಸ್ಸಿನಿಂದ ಯಾವುದೆ ಕೆಲಸದಲ್ಲಿ ನಿರತರಾಗುವುದಿಲ್ಲ. ಉತ್ತಮ ವಿದ್ಯೆ ಮತ್ತು ಬುದ್ದಿ ಇರುತ್ತದೆ. ಆದರೆ ಅದನ್ನು ಸೂಕ್ತವಾದ ಹಾದಿಯಲ್ಲಿ ಬಳಸಿಕೊಳ್ಳುವುದಿಲ್ಲ. ಸೋಲು ಗೆಲುವು ಇವರಿಗೆ ದೊಡ್ಡ ವಿಚಾರವಾಗುವುದಿಲ್ಲ. ಇವರ ಜೀವನಕ್ಕೆ ಇವರಲ್ಲಿನ ವಿದ್ಯೆ ಮತ್ತು ಬುದ್...