Bengaluru, ಜೂನ್ 5 -- ಕೆಲವರ ಹೆಬ್ಬೆರಳಿನಲ್ಲಿ ಸುರುಳಿಯಾಕಾರದ ರೇಖೆಗಳು ತಟ್ಟೆಯಂತೆ ಒಂದರ ಮೇಲೆ ಒಂದು ಇರುತ್ತದೆ. ತಟ್ಟೆಯನ್ನು ಜೋಡಿಸಿರುವಂತೆ ನಾವು ಕಾಣಬಹುದು. ಇಂತಹವರು ಯಾವುದೇ ವಿಚಾರದಲ್ಲಿಯೂ ದೃಢವಾದ ನಿಲುವನ್ನು ತೆಗೆದುಕೊಳ್ಳುವುದಿಲ್ಲ. ಒಳ್ಳೆಯ ವಿದ್ಯೆ ಇರುತ್ತದೆ. ವಿಶೇಷವಾದ ಬುದ್ಧಿವಂತಿಕೆ ಇರುತ್ತದೆ. ಆದರೆ ಅದನ್ನು ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಇದರಿಂದಾಗಿ ತಾವೇ ಮಾಡಿದ ತಪ್ಪಿಗೆ ತೊಂದರೆ ಅನುಭವಿಸುತ್ತಾರೆ. ಅದೃಷ್ಟವೆಂದರೆ ಇವರಿಗೆ ಸಹಾಯ ಮಾಡಲು ಆತ್ಮೀಯರ ದಂಡೆ ಇರುತ್ತದೆ. ಕೆಲವೊಮ್ಮೆ ಇವರ ತಪ್ಪು ನಿರ್ಧಾರಗಳನ್ನು ಬೇರೆಯವರು ಒಪ್ಪಿಕೊಳ್ಳುತ್ತಾರೆ. ಉತ್ತಮ ಹಣವನ್ನು ಸಂಪಾದಿಸುವ ಆಸೆ ಇರುತ್ತದೆ.

ಈ ರೀತಿ ಹೆಬ್ಬೆರಳಿನಲ್ಲಿ ಇದ್ದರೆ ಹಣದ ಕೊರತೆ ಇಲ್ಲದೆ ಹೋದರು ನಿರೀಕ್ಷೆಯಂತೆ ಇವರಿಗೆ ವರಮಾನ ದೊರೆಯುವುದಿಲ್ಲ. ದಾಂಪತ್ಯ ಜೀವನದಲ್ಲಿ ಎಲ್ಲರಿಗೂ ಇವರು ಮಾದರಿಯಾಗುತ್ತಾರೆ. ಆಪತ್ತಿನಲ್ಲಿ ಇದ್ದವರಿಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಉನ್ನತ ...