ಭಾರತ, ಜುಲೈ 24 -- ಬೆಂಗಳೂರು: ಬಿಬಿಎಂಪಿಯ ಪೂರ್ವ ವಲಯ ವ್ಯಾಪ್ತಿಯ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಆರ್.ಟಿ.ನಗರದ ಹೆಚ್.ಎಮ್.ಟಿ ಆಟದ ಮೈದಾನದಲ್ಲಿ, ಜುಲೈ 22 ಮತ್ತು 23, 2025 ರಂದು ಆಯೋಜಿಸಲಾದ ಎರಡು ದಿನಗಳ "ಬೃಹತ್ ಇ-ಖಾತಾ ಮೇಳ" ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ದೊರೆತು ಯಶಸ್ವಿಯಾಗಿದೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 08 ವಾರ್ಡ್‌ಗಳನ್ನು ಒಳಗೊಂಡಂತೆ, ಈ ಮೇಳದಲ್ಲಿ ಸಾರ್ವಜನಿಕರಿಗೆ ಸುಲಭ ಮತ್ತು ಪಾರದರ್ಶಕ ಸೇವೆ ಒದಗಿಸುವ ಉದ್ದೇಶದಿಂದ, ವಿವಿಧ ಹಂತದ ಕಾರ್ಯಚಟುವಟಿಕೆಗಳಿಗಾಗಿ:

- ಇಪಿಐಡಿ ಪರಿಶೀಲನೆಗಾಗಿ: 6 ಕೌಂಟರ್‌ಗಳು

- ದಾಖಲೆ ಸ್ಕ್ಯಾನಿಂಗ್ ಮತ್ತು ಅಪ್ಲೋಡ್‌ಗಾಗಿ: 10 ಕೌಂಟರ್‌ಗಳು

- ದಾಖಲೆ ಪರಿಶೀಲನೆ ಮತ್ತು ಅನುಮೋದನೆಗಾಗಿ: 10 ಕೌಂಟರ್‌ಗಳನ್ನು ಸ್ಥಾಪಿಸಲಾಗಿತ್ತು.

40 ಕ್ಕೂ ಅಧಿಕ ಲ್ಯಾಪ್‌ಟಾಪ್‌ಗಳ ಸಹಾಯದಿಂದ, ಪ್ರತಿ ಹಂತದ ಪ್ರಕ್ರಿಯೆ ಸಮರ್ಪಕವಾಗಿ ನಡೆಯುವಂತೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಎರಡು ದಿನಗಳ ಈ ಮೇಳದಲ್ಲಿ ನಿನ್ನೆ ದಿನ 485 ಟೋಕನ್ ಹಾಗೂ ಇಂದ...