ಭಾರತ, ಫೆಬ್ರವರಿ 13 -- Ranveer Allahbadia: ಹೆತ್ತವರ ಖಾಸಗಿ ಕ್ಷಣಗಳ ಕುರಿತು ವಿಲಕ್ಷಣ ಹೇಳಿಕೆ ನೀಡಿದ ಬಳಿಕ ತನ್ನ ಗರ್ಲ್‌ಫ್ರೆಂಡ್‌ಗೂ ರಣವೀರ್ ಅಲಹಾಬಾದಿಯ ಬೇಡವಾದನೇ ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ಸಮಯ್ ರೈನಾ ಅವರ ಇಂಡಿಯಾಸ್ ಗಾಟ್ ಲ್ಯಾಟೆಂಟ್ ಕಾರ್ಯಕ್ರಮದಲ್ಲಿರಣವೀರ್ ಅಲಹಾಬಾದಿಯ ಅವರ ವಿವಾದಾತ್ಮಕ ಹೇಳಿಕೆಗಳಿಗೆ ತೀವ್ರ ಟೀಕೆಗಳು ಎದುರಾಗಿವೆ. ಇದೇ ಸಮಯದಲ್ಲಿ ರಣವೀರ್‌ ಅಲಹಾಬಾದಿಯ ಮತ್ತು ಆತನ ಗೆಳತಿ ನಿಕ್ಕಿ ಶರ್ಮಾ ಪರಸ್ಪರ ಅನ್‌ಫಾಲೋ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದೇ ಸಮಯದಲ್ಲಿ ನಿಕ್ಕಿ ಶರ್ಮಾ ಅವರು "ನಕಾರಾತ್ಮಕ ಶಕ್ತಿಯನ್ನು ತಿರಸ್ಕರಿಸುವುದಾಗಿ" ನಿಗೂಢ ಅರ್ಥದ ಪೋಸ್ಟ್‌ ಮಾಡಿದ್ದಾರೆ. ಇದು ಇವರಿಬ್ಬರ ಬ್ರೇಕಪ್‌ ವದಂತಿಗೆ ಇನ್ನಷ್ಟು ತುಪ್ಪ ಸುರಿದಿದೆ.

ಬಾಲಿವುಡ್ ಶಾದಿಸ್ ವರದಿ ಮಾಡಿರುವ ಪ್ರಕಾರ ರಣವೀರ್‌ ಅವರು ನಿಕ್ಕಿಯನ್ನು ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ. "ಇವರಿಬ್ಬರು ಅನ್‌ಫಾಲೋ ಮಾಡಿದ್ದಾರೆ. ಇವರಿಬ್ಬರೂ ಬ್ರೇಕಪ್‌ ಆಗಿದ್ದಾರೆ" ಎಂಬ ಊಹಾಪೋಹಕ್ಕೆ ಇದು ...