Bangalore, ಮಾರ್ಚ್ 15 -- ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಅಮ್ಮ ಭಾಗ್ಯಮ್ಮಳಾಗಿ ನಟಿಸುತ್ತಿರುವ ನಟಿ ಚಿತ್ಕಳಾ ಬಿರಾದಾರ್‌ ಅವರು ಸೋಷಿಯಲ್‌ ಮೀಡಿಯಾದಲ್ಲಿ ಇಂದು ತನ್ನ ತಂದೆಯ ಹುಟ್ಟುಹಬ್ಬದ ನಿಮಿತ್ತ ದೀರ್ಘ ಬರಹವೊಂದನ್ನು ಹಂಚಿಕೊಂಡಿದ್ದಾರೆ. ತನ್ನ ಅಪ್ಪನ ಗುಣಗಾನದ ಜತೆಗೆ ಅವರ ಇಂದಿನ ಕಷ್ಟಗಳ ಕುರಿತೂ ಬರೆದಿದ್ದಾರೆ. ಚಿತ್ಕಳಾ ಬಿರಾದರ್‌ ಅವರು ಕನ್ನಡತಿ, ಅಗ್ನಿಸಾಕ್ಷಿ, ಅವನು ಮತ್ತೆ ಶ್ರಾವಣಿ, ಅಮೃತವರ್ಷಿಣಿ ಧಾರಾವಾಹಿಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಅಮೃತಾರೆ ಸೀರಿಯಲ್‌ನಲ್ಲಿ ಈಕೆಗೆ ಸದ್ಯ ಮಾತನಾಡಲು ಸಾಧ್ಯವಿರದ ಪಾತ್ರ ನೀಡಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಅಮೃತಧಾರೆ ಧಾರಾವಾಹಿ ನಟಿ ಚಿತ್ಕಳಾ ಬಿರಾದಾರ್‌ ವಿಡಿಯೋ ಹಂಚಿಕೊಂಡು ಹೀಗೆ ಬರೆದಿದ್ದಾರೆ. "ನನ್ನಪ್ಪಾ ನನ್ನ ಜೀವನದ ಅತಿ ದೊಡ್ಡ ಹೀರೊ ! ಇಂದಿಗೆ 94'ವರ್ಷ ಪೂರೈಸಿದ ಕನ್ನಡ ಭಾಷಾ ಮತ್ತು ಜನಪದ ಪಂಡಿತ . ಮ ಗು ಬಿರಾದಾರ ಎಂದು ಹೆಸರಿದ್ದರೂ ' ಮಗು' ಎಂದೇ ಕಾವ್ಯನಾಮದಡಿ ಸಾಹಿತ್ಯ ಸೇವೆಗೈದವರು. ನನ್ನೊಳಗಿನ ಎಲ್ಲ ಒಳ್ಳೆ ಗ...