Bangalore, ಫೆಬ್ರವರಿ 12 -- ಬೆಂಗಳೂರು: ಅಪ್ಪ, ಅಮ್ಮ ಕಟ್ಟಿದ್ದ ಹಳೆಯ ಕಾಲದ ಮನೆಯನ್ನು ಕೆಡವಿ ಹೊಸ ಮನೆಯನ್ನು ನಿಮಾಣ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ದಶಕಗಳ ಹಿಂದೆ ಪೋಷಕರು ಬೆವರು ಸುರಿಸಿ ಕಟ್ಟಿದ ಮನೆ, ಅವರು ಬಾಳಿ ಬದುಕಿದ ಮನೆ ಎಂಬ ಸೆಂಟಿಮೆಂಟ್‌ ಗಳಿಗೆ ಆಧುನಿಕ ಕಾಲದಲ್ಲಿ ಅವಕಾಶವೇ ಇಲ್ಲ. ಎಲ್ಲರೂ ಕೈತುಂಬ ಸಂಬಳ ಎಣಿಸಿಕೊಳ್ಳುವ ಮಕ್ಕಳಿಗೆ ತಮ್ಮ ಅನುಕೂಲ ಮತ್ತು ಐಷಾರಾಮಿ ಮನೆ ಇರಬೇಕು ಎಂದು ಆಸೆ ಪಟ್ಟು ಹಳೆಯ ಕಾಲದ ಮನೆಯನ್ನು ಕೆಡವುದು ಸಹಜವಾಗಿದೆ. ಇದು ತಪ್ಪು ಎಂದು ಹೇಳಲೂ ಆಗುವುದಿಲ್ಲ. ಆದರೆ ಅಪರೂಪ ಎಂಬಂತೆ ಕೈತುಂಬಾ ಹಣವಿದ್ದರೂ ಮನೆಯನ್ನು ಕೆಡವದೆ ಅಮ್ಮನ ಕೋರಿಕೆಯಂತೆ ಹಳೆಯ ಮನೆಯನ್ನೇ ನೂರು ಅಡಿಗಳಷ್ಟು ಲಿಫ್ಟ್‌ ಮಾಡಿ ಮನೆಯನ್ನು ಉಳಿಸಿಕೊಳ್ಳಲು ಮಕ್ಕಲು ಮುಂದಾಗಿದ್ದಾರೆ.

ಬೆಂಗಳೂರಿನ ಮಹಾದೇವಪುರ ವಿಧಾನಸಭಾ ಕ್ಷೇತ್ರದ ಬಿಇಎಂಎಲ್ ಲೇಔಟ್ ನಲ್ಲಿರುವ ಯಲ್ಲಪ್ಪ ಅವರ ಮನೆ ಮಳೆಗಾಲ ಬಂತೆಂದರೆ ಜಲಾವೃತವಾಗುತ್ತಿತ್ತು. ಮನೆಯೊಳಗೆ ಹರಿದು ಎರಡರಿಂದ ಮೂರು ಅಡಿಗಳಷ್ಟು ಕೊಳಚೆ ನೀರು ನಿಲ್ಲುತ್ತಿತ್ತು. ಆದ...