ಭಾರತ, ಏಪ್ರಿಲ್ 22 -- ನಿವೃತ್ತ ಡಿಜಿಪಿ ಓಂ ಪ್ರಕಾಶ್‌ ಅವರ ಹತ್ಯೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮನೆಯೊಳಗೆ ನಾಲ್ಕು ಗೋಡೆಗಳ ಮಧ್ಯೆ ನಡೆದ ಕ್ರೌರ್ಯ ಬಯಲಾಗಿದೆ. ಈ ಪ್ರಕರಣವು ಹಲವು ಅನುಮಾನಗಳ ಜೊತೆಗೆ ಪ್ರಶ್ನೆಗಳನ್ನೂ ಹುಟ್ಟುಹಾಕಿವೆ. ಒಂದು ಕಾಲದಲ್ಲಿ ಪ್ರಬಲ ಹುದ್ದೆಗಳನ್ನು ನಿರ್ವಹಿಸಿದ್ದ ಅಧಿಕಾರಿಯೊಬ್ಬರಿಗೆ ಈ ಸ್ಥಿತಿ ಬರಬಾರದಿತ್ತು ಎಂದು ಹಲವರು ಹೇಳುತ್ತಿದ್ದಾರೆ. ಇತ್ತೀಚೆಗೆ ಮಹಿಳೆಯರು ಕ್ರೌರ್ಯದಲ್ಲಿ ಭಾಗಿಯಾಗುತ್ತಿರುವುದು ಹೆಚ್ಚುತ್ತಿದೆ ಎಂಬ ಪ್ರಶ್ನೆಗಳು ಹುಟ್ಟುತ್ತಿವೆ. ಈ ಕುರಿತು ಮನಶ್ಶಾಸ್ತ್ರಜ್ಞರಾದ ರೂಪಾ ರಾವ್‌ ಅವರು ಬರೆದಿರುವ ಬರಹ ಇಲ್ಲಿದೆ.

ಇತ್ತೀಚೆಗೆ ಹೆಂಗಸರಲ್ಲಿ ಕ್ರೌರ್ಯ ಜಾಸ್ತಿ ಆಗ್ತಿದೆಯೇ ಎಂಬ ಪ್ರಶ್ನೆ ಹೊತ್ತು ಟಿವಿಯವರು ಬಂದಿದ್ದರು.‌ ಇದು ಡಿಜಿಪಿ ಅವರ ಕೊಲೆಯ ಹಿನ್ನೆಲೆಯಲ್ಲಿ ಬಂದ ಪ್ರಶ್ನೆ. ಅಲ್ಲಿ ಹೇಳಲಾದ ಹಲವು ವಿಷಯಗಳ ಜೊತೆ‌‌ ಇನ್ನೊಂದಷ್ಟು ವಿಷಯಗಳು ಇಲ್ಲಿವೆ. ವಿಷಯ ಯಾವ ಕಡೆಯೂ ವಾಲಬಾರದೆಂಬ ಎಚ್ಚರಿಕೆಯೊಂದಿಗೆ ಕೇವಲ ವಿಷಯವನ್ನು ಮಾತ್ರ ಹೇಳುತ್ತಿದ್ದೇನೆ. ಮೊದಲಿಗೆ ಮ...