ಭಾರತ, ಫೆಬ್ರವರಿ 5 -- ನೀವು ಹೆಣ್ಣು ಮಗುವಿನ ತಾಯಿ ಅಥವಾ ತಂದೆ ಆಗಿದ್ದರೆ ಇದೋ ನಿಮಗೊಂದು ಕಿವಿಮಾತು. (ಎಲ್ಲರಿಗೂ ಹೀಗೆ ಅಂತಲ್ಲ, ಆದರೆ ತಂದೆಯ ಪ್ರೀತಿ ಇಲ್ಲದೇ ಬೆಳೆಯುವ ಕೆಲವು ಹೆಣ್ಣುಮಕ್ಕಳ ಯೋಚನಾ ಶಕ್ತಿಯ ವೈರಿಂಗ್ ಬೇರೆಯೇ ಆಗಿಬಿಡಬಹುದು, ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು). ಹೆಣ್ಣುಮಕ್ಕಳಿಗೆ ತಂದೆ ಒಂದು ರಕ್ಷಾ ಕವಚದಂತೆ. ಮಾತ್ರವಲ್ಲ, ಅವಳ‌ ಹೆಣ್ತನಕ್ಕೆ ಗೌರವ ಕೊಡುವ ಮೊದಲ‌ ಗಂಡೂ ಹೌದು. ಹಾಗಾಗಿ ಇರಬೇಕು ಹೆಣ್ಣುಮಕ್ಕಳಿಗೆ ತಂದೆಯೇ ಮೊದಲ ಹೀರೊ ಅನ್ನುವುದು.

ನಾನು ಕೌನ್ಸೆಲಿಂಗ್ ಮಾಡಿದ, ಮಾಡುತ್ತಿರುವ ತಂದೆ ಇಲ್ಲದ ಅಥವಾ ಇದ್ದೂ ಕೂಡ ತಿರಸ್ಕಾರಕ್ಕೆ ಒಳಗಾದ ಅಥವಾ ತಂದೆಯ ಪ್ರೀತಿ ಸಿಗದ ಕೆಲವು ಹೆಣ್ಣುಮಕ್ಕಳ ಸ್ವಯಂಕೃತ ಅಪರಾಧದ ಕಥೆಗಳನ್ನು ಕೇಳುವಾಗ ಅನಿಸಿದ್ದು ಈ ಕೆಲವೊಂದು ವಿಷಯಗಳಲ್ಲಿ ತಾಯಿ ಹಾಗೂ ತಂದೆ ಇಬ್ಬರೂ ತಮ್ಮ‌ ಮಗಳ ವರ್ತಮಾನ ಮಾತ್ರವಲ್ಲ ಅವಳ‌ ಭವಿಷ್ಯತ್ತಿನ ಪ್ರತಿಯೊಂದೂ ಹೆಜ್ಜೆಗೂ ಹೊಣೆಗಾರರು ಅಂತ.

ಹಾಗಾಗಿ ಇಲ್ಲಿ ಒಂದಷ್ಟು ವಿಷಯಗಳನ್ನು ಅಂಶಗಳನ್ನಾಗಿ ಬರೆದಿರುವೆ. ದಯವಿಟ್ಟು ಸಾಧ್ಯವ...