ಭಾರತ, ಮಾರ್ಚ್ 10 -- ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ನ ಎರಡನೇ ಮದುವೆ ಪ್ರಸಂಗವು ಕಿರುತೆರೆ ಪ್ರೇಕ್ಷಕರ ಅಸಹನೆಗೆ ಪಾತ್ರವಾಗಿದೆ. ಭೂಮಿಕಾ ಅಳುವುದು, ಗೌತಮ್‌ ಮದುವೆಗೆ ಒಪ್ಪಿಕೊಳ್ಳುವುದು ಇದೆಲ್ಲವೂ ವಾಸ್ತವಕ್ಕಿಂತ ದೂರದ ಕಥೆ ಎಂದು ಪ್ರೇಕ್ಷಕರು ಅಸಹನೆ ವ್ಯಕ್ತಪಡಿಸಿದ್ದರು. ಇದೀಗ ಗೌತಮ್‌ ಮದುವೆ ಕಥೆಯಲ್ಲಿರುವ ಇನ್ನೊಂದು ಅಂಶದ ಕುರಿತು ಪ್ರೇಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಹೆಣ್ಣು ಮಕ್ಕಳು ಅಂದ್ರೆ ಆಟದ ವಸ್ತು ಅಂದುಕೊಂಡ್ರ ಎಂದು ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ.

ಕನ್ನಡ ಸೀರಿಯಲ್‌ಗಳಿಗೆ ಲಕ್ಷಾಂತರ ಜನರು ವೀಕ್ಷಕರು ಇರುತ್ತಾರೆ. ಪ್ರೇಕ್ಷಕರು ಸೀರಿಯಲ್‌ನಲ್ಲಿರುವ ಪಾತ್ರಗಳನ್ನು ತುಂಬಾ ಹಚ್ಚಿಕೊಂಡು ಬಿಡುತ್ತಾರೆ. ಅಮೃತಧಾರೆ ಧಾರಾವಾಹಿಯ ಗೌತಮ್‌ ಮತ್ತು ಭೂಮಿಕಾ ಇದೇ ರೀತಿ ವೀಕ್ಷಕರ ಅಭಿಮಾನಕ್ಕೆ ಪಾತ್ರವಾದವರು. ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳ ಪಾತ್ರ ತುಂಬಾ ಗಟ್ಟಿಯಾಗಿತ್ತು. ಮನೆಯಲ್ಲಿ ಏನೇ ಸಂಕಷ್ಟ ಬಂದರೆ ಪರಿಹಾರ ಇವರ ಮೂಲಕ ದೊರಕುತ್...