ಭಾರತ, ಮಾರ್ಚ್ 22 -- ಕರ್ನಾಟಕದಲ್ಲಿ ಕಳೆದ ಕೆಲ ದಿನಗಳಿಂದ 'ಮಧುಬಲೆ' (ಹನಿಟ್ರ್ಯಾಪ್) ವಿಚಾರ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದ ವಿಧಾನಸಭೆಯಲ್ಲಿಯೇ ಈ ಕುರಿತು ಕಾವೇರಿದ ಚರ್ಚೆ ನಡೆದಿದ್ದು ಸರ್ಕಾರದ ಭಾಗವಾಗಿರುವ ಸಚಿವ ಕೆ.ಎನ್.ರಾಜಣ್ಣ ಅವರು 48 ಜನರ ಸಿಡಿಗಳಿವೆ. ಇದರಲ್ಲಿ ರಾಜಕಾರಿಣಿಗಳ ಜೊತೆಗೆ ಹಿರಿಯ ಅಧಿಕಾರಿಗಳು, ನ್ಯಾಯಾಧೀಶರದೂ ಇದೆ ಎಂದು ಹೇಳಿದ್ದಾರೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಗೃಹ ಸಚಿವ ಡಾ ಜಿ.ಪರಮೇಶ್ವರ ಭರವಸೆ ಕೊಟ್ಟಿದ್ದಾರೆ. ಯಾರಿಗೂ ದಯೆ ತೋರುವುದಿಲ್ಲ. ಕಟ್ಟುನಿಟ್ಟು ತನಿಖೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಗಟ್ಟಿದನಿಯಲ್ಲಿ ಹೇಳಿದ್ದಾರೆ. ಅದರೆ ಈ ಚರ್ಚೆ, ಭರವಸೆಗಳಿಂದಾಚೆಗೆ ಚಾಚಿಕೊಂಡಿರುವ ಸಮಸ್ಯೆಯ ಮೂಲದ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ ಎನ್ನುವುದು ಜನರ ಅಭಿಪ್ರಾಯ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ರಾಷ್ಟ್ರಸಮಿತಿಯ ರವಿ ಕೃಷ್ಣಾರೆಡ್ಡಿ ಅವರ ಫೇಸ್‌ಬುಕ್ ಪೋಸ್ಟ್‌ ಎಲ್ಲ ಗಮನ ಸೆಳೆದಿದೆ. ಅವರ ಬರಹವನ...