ಭಾರತ, ಮೇ 26 -- ಸಾಮಾನ್ಯವಾಗಿ ಗಂಡು-ಹೆಣ್ಣು ಡಾಕ್ಟರ್, ಎಂಜಿನಿಯರ್‌ ಇಂತಹ ದೊಡ್ಡ ಹುದ್ದೆಗಳಲ್ಲಿ ಇದ್ದಾಗ ಮಾತ್ರ ಅವರ ವೃತ್ತಿಯನ್ನು ಲಗ್ನಪತ್ರಿಕೆಗಳಲ್ಲಿ ಹೆಸರಿನ ಕೆಳಗೆ ಪ್ರಕಟ ಮಾಡಲಾಗುತ್ತದೆ. ಎಷ್ಟೋ ಮಂದಿ ತಮ್ಮ ವೃತ್ತಿ ಏನು ಎಂಬುದನ್ನು ಇನ್ನೊಬ್ಬರ ಮುಂದೆ ತಿಳಿಸಲು ಹಿಂಜರಿಯುತ್ತಾರೆ.

ನಮ್ಮ ವೃತ್ತಿ ಸಣ್ಣದೋ ದೊಡ್ಡದೋ ಅದನ್ನು ನಾವೇ ಪ್ರೀತಿಸದಿದ್ದರೆ ಗೌರವಿಸದಿದ್ದರೆ ಇನ್ಯಾರು ಗುರುತಿಸುತ್ತಾರೆ ಅಲ್ಲವೇ, ಲಗ್ನಪತ್ರಿಕೆಯೊಂದರಲ್ಲಿ ವಧು ಮೆಹಂದಿ ಆರ್ಟಿಸ್ಟ್ ಎನ್ನುವುದನ್ನು ಪ್ರಕಟಿಸಿರುವುದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಲೇಖಕಿ ಅಕ್ಷತಾ ಹುಂಚದಕಟ್ಟೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಬರಹವನ್ನು ನೀವೂ ಓದಿ.

ಈ ಹೊತ್ತಿನ ಎಷ್ಟೋ ಲಗ್ನ ಪತ್ರಿಕೆಗಳನ್ನು ನೋಡಿದ್ರೆ, ಅದರ ಐಭೋಗ ನೋಡಿ ಅಯ್ಯೋ ಇಷ್ಟೆಲ್ಲ ಲಗ್ನ ಪತ್ರಿಕೆಗೆ ಖರ್ಚು ಮಾಡೋ ಅಗತ್ಯ ಇದೆಯ ಎಂಬ ಪ್ರಶ್ನೆ ಮೂಡುತ್ತೆ. ಶಿವಮೊಗ್ಗದ ಪ್ರಜಾವಾಣಿ ಅರೆಕಾಲಿಕ ವರದಿಗಾರ ನಾಗರಾಜ ಹುಲಿಮನೆ ಹಾಗೂ ನಮ್ಮೂರಿನ ಹತ್ತಿರದ ಹುಡುಗಿ ಚಂದನ ಪರಸ್ಪರ ಪ್...