Bengaluru, ಮಾರ್ಚ್ 26 -- Antha Kannada Movie: ಕನ್ನಡ ಚಿತ್ರರಂಗದ ಜನಪ್ರಿಯ ಚಿತ್ರಗಳಲ್ಲೊಂದು 1981ರಲ್ಲಿ ಬಿಡುಗಡೆಯಾದ ಅಂಬರೀಶ್‍ ಅಭಿನಯದ, ರಾಜೇಂದ್ರ ಸಿಂಗ್‍ ಬಾಬು ನಿರ್ದೇಶನದ 'ಅಂತ'. ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಎಚ್‍.ಕೆ. ಅನಂತ ರಾವ್ ಅವರ ಅದೇ ಹೆಸರಿನ ಕಾದಂಬರಿ ಆಧರಿಸಿದ ಈ ಚಿತ್ರದಲ್ಲಿ ಹಿಂಸೆ ಹೆಚ್ಚಿದ್ದ ಕಾರಣ, ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಸೆನ್ಸಾರ್ ಮಂಡಳಿ ಮೊದಲು ಒಪ್ಪಿರಲಿಲ್ಲ. ಸಂಸತ್ತಿನಲ್ಲಿ ಸಾಕಷ್ಟು ಚರ್ಚೆಯಾಗಿ ಕೊನೆಗೆ ಚಿತ್ರದ ಬಿಡುಗಡೆಗೆ ಅನುಮತಿ ನೀಡಲಾಗಿತ್ತು. ಬಿಡುಗಡೆಯ ನಂತರ ದೊಡ್ಡ ಯಶಸ್ಸು ಕಾಣುವುದರ ಜೊತೆಗೆ, ತೆಲುಗು, ತಮಿಳು ಮತ್ತು ಹಿಂದಿಗೆ ರೀಮೇಕ್‍ ಸಹ ಆಗಿತ್ತು.

ಈ ಚಿತ್ರವನ್ನು ಡಾ. ರಾಜಕುಮಾರ್ ಅವರ ಜೊತೆಗೆ ಮಾಡಬೇಕು ಎಂಬ ಪ್ರಯತ್ನ ನಡೆದಿತ್ತಂತೆ. ವಿಷ್ಣುವರ್ಧನ್‍ ಜೊತೆಗೆ ಮಾಡುವ ಯೋಚನೆಯೂ ಇತ್ತಂತೆ. ಆದರೆ, ಅಂತಿಮವಾಗಿ ಈ ಚಿತ್ರದಲ್ಲಿ ಅಂಬರೀಶ್‍ ನಾಯಕನಾಗಿ ಕಾಣಿಸಿಕೊಂಡರು. ಇಷ್ಟಕ್ಕೂ 'ಅಂತ' ಚಿತ್ರದಲ್ಲಿ ಡಾ. ರಾಜಕುಮಾರ್ ಯಾಕೆ ನಟಿಸಲಿಲ್ಲ, ವಿಷ್ಣುವರ...