ಭಾರತ, ಫೆಬ್ರವರಿ 21 -- ಬೆಂಗಳೂರು: ಕರ್ನಾಟಕದಲ್ಲಿ ವಾಹನಗಳಿಗೆ ಹೆಚ್‌ಎಸ್‌ಆರ್‌ಪಿ (ಎಚ್‌ಎಸ್‌ಆರ್‌ಪಿ- ಅತಿಸುರಕ್ಷಿತ ನೋಂದಣಿ ಫಲಕ) ಅಳವಡಿಸುವ ಕಾಲಮಿತಿ ಮತ್ತೊಮ್ಮೆ ವಿಸ್ತರಣೆಯಾಗಿದೆ. ವಾಹನ ಮಾಲೀಕರಿಗೆ ಅನುಕೂಲವಾಗುವಂತೆ ಮಾರ್ಚ್‌ 31ರ ತನಕ ಎಚ್‌ಎಸ್‌ಆರ್‌ಪಿ ಅಳವಡಿಕೆ ಡೆಡ್‌ಲೈನ್ ಅನ್ನು ವಿಸ್ತರಿಸಿರುವುದಾಗಿ ಕರ್ನಾಟಕ ಸರ್ಕಾರ ತಿಳಿಸಿದೆ. ಈ ಕುರಿತು ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆಯನ್ನೂ ಸರ್ಕಾರ ಪ್ರಕಟಿಸಿದ್ದು, ಮೂಲ ಆದೇಶದಲ್ಲಿ ಯಾವುದೇ ಮಾರ್ಪಾಡು ಇಲ್ಲ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕದಲ್ಲಿ ಏಪ್ರಿಲ್ 1, 2019 ರ ಮೊದಲು ನೋಂದಾಯಿಸಲಾದ ಒಟ್ಟು 2 ಕೋಟಿ ವಾಹನಗಳಿವೆ ಎಂದು ಸಾರಿಗೆ ಇಲಾಖೆ ದತ್ತಾಂಶ ಹೇಳಿದೆ.

ಕರ್ನಾಟಕದಲ್ಲಿ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್​ ಪ್ಲೇಟ್ (ಹೆಚ್​ಎಸ್​ಆರ್​ಪಿ) ಅಳವಡಿಸುವುದು ಕಡ್ಡಾಯವಾಗಿದ್ದರೂ, ಇದಕ್ಕೆ ಸಂಬಂಧಿಸಿದ ಕೇಸ್‌ ನ್ಯಾಯಾಲಯದ ವಿಚಾರಣೆಯಲ್ಲಿರುವ ಕಾರಣ ಅಳವಡಿಕೆ ಗಡುವು ಮುಂದೆ ಹೋಗುತ್ತಲೇ ಇದೆ. ನ್ಯಾಯಾಲಯದಿಂದ ಅಂತಿಮ ಆದೇಶ ಹೊರ ಬೀಳುವವರೆ...