Bangalore, ಜನವರಿ 27 -- ಬೆಂಗಳೂರು: ಬೆಂಗಳೂರು ಹೆಚ್ಚು ಬಾಡಿಗೆ ಕೊಟ್ಟು ಅಪಾರ್ಟ್‌ಮೆಂಟ್‌ ಅನ್ನು ಹಿಡಿಯುವ ಬಾಡಿಗೆದಾರರು ಭೂಮಾಲೀಕರಿಂದ ಸಾಕಷ್ಟು ಕಿರುಕುಳು ಅನುಭವಿಸುತ್ತಾರೆ. ಕೆಲವೊಮ್ಮೆ ಭದ್ರತಾ ಠೇವಣಿಯನ್ನೂ ವಾಪಸ್‌ ಪಡೆಯಲು ಆಗದೇ ಕೊನೆಗೆ ಮನೆ ಖಾಲಿ ಮಾಡಿಕೊಂಡು ಹೋಗುತ್ತಾರೆ. ಬೆದರಿಕೆಗೋ ಇಲ್ಲವೇ ಕಾನೂನಿನ ಮೊರೆ ಹೋಗಿ ಅದಕ್ಕಾಗಿ ಸಮಯ ಹಾಗೂ ಹಣ ವ್ಯಯಿಸುವ ಬದಲು ಸುಮ್ಮನಾಗಿ ಬಿಡುವವರೂ ಅನೇಕರು ಇದ್ದಾರೆ. ಇಂತಹದ್ದೇ ಪ್ರಕರಣವೊಂದು ಬೆಂಗಳೂರಿನಲ್ಲಿ ನಡೆದಿದೆ. ಮಾಸಿಕ ಹೆಚ್ಚು ಬಾಡಿಗೆ ಕೊಟ್ಟು ಬಾಡಿಗೆ ಹಿಡಿದವರು ಕೊನೆಗೆ ಮಾಲೀಕರ ಅಸಹಕಾರ ಹಾಗೂ ಕಿರುಕುಳದಿಂದ ಭದ್ರತಾ ಠೇವಣಿಯನ್ನೂ ಪಡೆದು ಬೇರೆಗೆ ಸ್ಥಳಾಂತರಗೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್‌ ಆಗಿದೆ.

ಬೆಂಗಳೂರಿನಲ್ಲಿ ಉದ್ಯೋಗಕ್ಕಾಗಿ ಬಂದ ದಂಪತಿಗಳು ಬಡಾವಣೆಯೊಂದರಲ್ಲಿ ಅಪಾರ್ಟ್‌ಮೆಂಟ್‌ ಖಾಲಿ ಇರುವ ಮಾಹಿತಿ ಆಧರಿಸಿ ಮಾತುಕತೆ ನಡೆಸಿ ಮಾಸಿಕ 55 ರೂ. ಬಾಡಿಗೆಯೊಂದಿಗೆ ಮನೆ ಹಿಡಿದಿದ್ದರು. 2 ಬಿಎಚ್‌ಕೆ ಮನೆಗೆ ಮುಂಗಡ ಭದ್ರತಾ ಠೇವಣಿ...