Bengaluru, ಮೇ 8 -- ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚಿನ ಕೆಲ ವರ್ಷಗಳಿಂದ ಹಳೇ ಸಿನಿಮಾಗಳ ಮರು ಬಿಡುಗಡೆ ಪರ್ವ ಜೋರಾಗಿದೆ. ಬಣ್ಣ ಬದಲಿಸಿಕೊಂಡು, ತಾಂತ್ರಿಕವಾಗಿ ಶ್ರೀಮಂತವಾಗಿ ಮತ್ತೆ ಬೆಳ್ಳಿತೆರೆ ಮೇಲೆ ಸಿನಿಮಾಗಳು ರಿಲೀಸ್‌ ಆಗಿ ಸದ್ದು ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಇದೀಗ 20 ವರ್ಷಗಳ ಹಿಂದೆ ತೆರೆಕಂಡು, ಹಿಟ್‌ ಪಟ್ಟ ಪಡೆದಿದ್ದ ಸಿನಿಮಾವೊಂದು ಮರು ಬಿಡುಗಡೆ ಆಗುತ್ತಿದೆ. ಆ ಚಿತ್ರವೇ ʻಸೈನೈಡ್‌ʼ. 2006ರಲ್ಲಿ ತೆರೆಕಂಡಿದ್ದ ʻಸೈನೈಡ್‌ʼ ಚಿತ್ರವನ್ನು ಎಎಂಆರ್‌ ರಮೇಶ್‌ ನಿರ್ದೇಶನ ಮಾಡಿದ್ದರು. ಇದೀಗ 10 ನಿಮಿಷಗಳ ಹೆಚ್ಚುವರಿ ದೃಶ್ಯಗಳ ಜತೆಗೆ ಮರು ಬಿಡುಗಡೆ ಆಗಲು ರೆಡಿಯಾಗಿದೆ. ಹಾಗಾದರೆ, ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ.

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರದ ಘಟನೆಗಳನ್ನು ಆಧರಿಸಿದ ʻಸೈನೈಡ್ʼ ಸಿನಿಮಾ ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿತ್ತು. ಅಕ್ಷಯ್ ಕ್ರಿಯೇಷನ್ಸ್ ನಲ್ಲಿ ಕೆಂಚಪ್ಪ ಗೌಡ ಹಾಗೂ ಎಸ್ ಇಂದುಮತಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ತಾರಾ, ರಂಗಾಯಣ ರಘು, ರವಿಕಾಳೆ...