Bangalore, ಏಪ್ರಿಲ್ 24 -- ಅಮೃತಧಾರೆ ಧಾರಾವಾಹಿಯಲ್ಲಿ ಜೀವನ್‌ ಕುಟುಂಬದ ಕಥೆಯಲ್ಲಿ ಒಂದು ಪ್ರಮುಖ ಘಟ್ಟ ತಲುಪಿದಂತೆ ಇದೆ. ಜೀವನ್‌ನ ಕುಡಿತದ ಚಟವನ್ನು ನಿಲ್ಲಿಸಲು ಭೂಮಿಕಾ ಕಣಕ್ಕೆ ಇಳಿದಿದ್ದಾಳೆ. ಮಹಿಮಾಳಿಗೆ ಮನೆಯಲ್ಲಿ ಕುಡಿಯಲು ಹೇಳಿದ್ದಾಳೆ. ಮಹಿಮಾ ಕುಡಿಯುವ ನಾಟಕ ಆರಂಭಿಸಿದ್ದಾಳೆ.

ಜೀವನ್‌ ಬಂದಾ ಮಹಿಮಾ ಕುಡಿಯುತ್ತಿದ್ದಾಳೆ. ಆತನ ಮಾತನ್ನು ಆಕೆ ಕೇಳುವುದಿಲ್ಲ. ನನ್ನಿಷ್ಟು ಕುಡಿಯುವೆ, ಏನಿವಾಗ ಎಂದು ಎದುರುತ್ತರ ನೀಡುತ್ತಾಳೆ.

ಅಲ್ಲಿಗೆ ಬಂದ ತಂದೆ ಸದಾಶಿವ ಮತ್ತು ಮಂದಾಕಿನಿ ಬಳಿ "ನೋಡಪ್ಪ, ಇವಳು ಮನೆಯಲ್ಲಿಯೇ ಕುಡಿಯುತ್ತಿದ್ದಾಳೆ, ಮನೆಯನ್ನೇ ಬಾರ್‌ ಮಾಡಿಕೊಂಡಿದ್ದಾಳೆ" ಎಂದು ಹೇಳುತ್ತಾನೆ.

"ನೀನು ಕುಡಿದರೆ ನಮಗೆ ಹೇಳಲಾಗಗುವುದಿಲ್ಲ ಅಂದರೆ, ಸೊಸೆ ಕುಡಿದರೆ ನಮಗೆ ಹೇಳಲಾಗುತ್ತದೆಯೇ?" ಎಂದು ಸದಾಶಿವ ಹೇಳುತ್ತಾರೆ.

"ನನ್ನ ನೆಮ್ಮದಿ ಹಾಳು ಮಾಡಬೇಕೆಂದು ಹೀಗೆಲ್ಲ ಪ್ಲ್ಯಾನ್‌ ಮಾಡಿದ್ದೀರಾ?" ಎಂದು ಜೀವನ್‌ ಕೋಪದಿಂದ ಹೇಳುತ್ತಾನೆ.

"ನೀವೇ ಇವಳಿಗೆ ಹೇಳಿಕೊಟ್ಟಿರ್ತಿರಾ, ಹೀಗೆಲ್ಲ ಮಾಡು ಅಂತ. ಇಷ್ಟೆಲ್ಲ ...