ಭಾರತ, ಮೇ 14 -- ಬೇಸಿಗೆ ಬಂತೆಂದರೆ ಹಣ್ಣುಗಳ ರಾಜ ಮಾವು ಮಾರುಕಟ್ಟೆಯನ್ನು ಅಲಂಕರಿಸುತ್ತದೆ. ಈ ರುಚಿಯಾದ, ಸುವಾಸನೆಭರಿತ ಹಣ್ಣಿಗೆ ಸಾಟಿ ಬೇರಿಲ್ಲ. ಮಾವು ನಾಲಿಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯವನ್ನೂ ಸುಧಾರಿಸುತ್ತದೆ. ಈ ಹಣ್ಣು ಅಗತ್ಯ ಪೋಷಕಾಂಶಗಳು ಮತ್ತು ಕ್ಯಾರೊಟಿನಾಯ್ಡ್‌ಗಳಿಂದ ಕೂಡಿದೆ. ಇದರಲ್ಲಿ ಪ್ರಬಲವಾದ ಉತ್ಕರ್ಷಣ ನಿರೋಧಕ ಅಂಶಗಳಿವೆ.

ಫೈಬರ್, ವಿಟಮಿನ್ ಸಿ ಮತ್ತು ವಿಟಮಿನ್ ಎ ಕೂಡ ಇದರಲ್ಲಿ ಸಮೃದ್ಧವಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚುವುದರಿಂದ ಹೃದ್ರೋಗದ ಅಪಾಯ ದೂರಾಗುವವರೆಗೆ ಮಾವಿನ ಹಣ್ಣಿನ ನಿರಂತರ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ.

ಉತ್ತಮ ನಾರಿನಾಂಶದ ಮೂಲ: ನಮ್ಮ ಜೀರ್ಣಕ್ರಿಯೆ ಸುಧಾರಿಸಲು ಸಾಕಷ್ಟು ನಾರಿನಾಂಶ ಇರುವ ಆಹಾರ ಖಾದ್ಯಗಳನ್ನು ಸೇವಿಸುವುದು ಅಗತ್ಯ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಹೃದ್ರೋಗ ಮತ್ತು ಕೆಲವು ರೀತಿಯ ಕ್ಯಾನ್ಸರ್ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೆಕ್ಟಿನ್ ಎಂದು ಕರೆಯಲ್ಪಡುವ ಸ...