ಭಾರತ, ಫೆಬ್ರವರಿ 14 -- ಬದಲಾಗುತ್ತಿರುವ ಜೀವನಶೈಲಿಯು ಸಾಕಷ್ಟು ತೊಂದರೆಗಳನ್ನು ಉಂಟು ಮಾಡುತ್ತಿದೆ. ಹಲವರು ಇದರಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಅಸಮರ್ಪಕ ಜೀವನಶೈಲಿ ಹಾಗೂ ಆಹಾರಕ್ರಮದ ಕಾರಣದಿಂದ ಹೃದ್ರೋಗದ ಸಮಸ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ವಯಸ್ಸಿನ ಭೇದವಿಲ್ಲದೇ ಚಿಕ್ಕ ಮಕ್ಕಳಿಂದ ದೊಡ್ಡವವರೆಗೆ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆಹಾರ, ಬದಲಾದ ಜೀವನಶೈಲಿಯ ಜೊತೆಗೆ ಅತಿಯಾದ ಒತ್ತಡವೂ ಇದಕ್ಕೆ ಪ್ರಮುಖ ಕಾರಣವಾಗುತ್ತಿದೆ. ಆ ಕಾರಣಕ್ಕೆ ಹೃದಯವನ್ನು ಬಲವಾಗಿಟ್ಟುಕೊಳ್ಳಬೇಕು.

ಹೃದಯ ಬಲವಾಗಿರಬೇಕು ಎಂದರೆ ಹೃದಯ ರಕ್ತನಾಳಕ್ಕೆ ಹೊಂದುವಂತಹ ವ್ಯಾಯಾಮಗಳನ್ನು ಮಾಡುವುದು ಮುಖ್ಯವಾಗುತ್ತದೆ. ಅದಕ್ಕಾಗಿ ಜಿಮ್‌ನಲ್ಲಿ ಬೆವರಿಳಿಸಬೇಕು, ಯೋಗ ಮಾಡಬೇಕು ಅಂತಿಲ್ಲ. ಮನೆಯಲ್ಲೇ 10 ನಿಮಿಷಗಳ ಕಾಲ ಈ ಕೆಲವು ವ್ಯಾಯಾಮಗಳನ್ನು ಮಾಡಿದರೆ ಸಾಕು.

ಸ್ಕಿಪ್ಪಿಂಗ್ ಅಥವಾ ಹಗ್ಗ ಜಿಗಿತ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಕೇವಲ ಸ್ಕಿಪ್ಪಿಂಗ್ ರೋಪ್ ಒಂದಿದ್ದರೆ ಸಾಕು ಈ ಸರಳ ವ್ಯಾಯಾಮವನ್ನು ಮನೆಯಲ್ಲಿ ಸ...