Bengaluru, ಫೆಬ್ರವರಿ 16 -- ಹೃದಯ ಸ್ತಂಭನ ಅಥವಾ ಹೃದಯಾಘಾತವು ಒಂದು ಹಠಾತ್ ಮತ್ತು ಮಾರಣಾಂತಿಕ ಸ್ಥಿತಿಯಾಗಿದ್ದು, ಇದರಲ್ಲಿ ಹೃದಯವು ಅನಿರೀಕ್ಷಿತವಾಗಿ ಬಡಿತವನ್ನು ನಿಲ್ಲಿಸುತ್ತದೆ. ಇದು ಮೆದುಳು ಮತ್ತು ಶ್ವಾಸಕೋಶಗಳು ಸೇರಿದಂತೆ ಪ್ರಮುಖ ಅಂಗಗಳಿಗೆ ರಕ್ತದ ಹರಿವನ್ನು ತಕ್ಷಣ ನಿಲ್ಲಿಸಲು ಕಾರಣವಾಗುತ್ತದೆ. ತ್ವರಿತ ಚಿಕಿತ್ಸೆ ಸಿಗದಿದ್ದರೆ, ಹೃದಯ ಸ್ತಂಭನವು ಕೆಲವೇ ನಿಮಿಷಗಳಲ್ಲಿ ವ್ಯಕ್ತಿಯ ಸಾವಿಗೆ ಕಾರಣವಾಗಬಹುದು. ಇತ್ತೀಚಿನ ದಿನಗಳಲ್ಲಿ ಯುವಜನತೆಯೇ ಹೆಚ್ಚಾಗಿ ಹೃದಯಾಘಾತಕ್ಕೆ ಬಲಿಯಾಗಿರೋದು ಆತಂಕಕಾರಿ ವಿಷಯವೇ. ಶಾಲೆಯಲ್ಲಿ, ಡ್ರೈವಿಂಗ್ ಸಮಯದಲ್ಲಿ, ಜಿಮ್‌‌‌‌ನಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಲೇ ಇದೆ. ಈ ಸಮಯದಲ್ಲಿ ಸೂಕ್ತ ಚಿಕಿತ್ಸೆ ಸಿಗದೇ ಪ್ರಾಣವನ್ನು ಕಳೆದುಕೊಂಡವರೇ ಅಧಿಕ. ಇದಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ಹೃದ್ರೋಗ ತಜ್ಞ ಡಾ.ಮುಖರ್ಜಿ ಮಡಿವಾಳ ಅವರು ಒಂದು ಆಸಕ್ತಿಕಾರಿ ಮಾಹಿತಿಯನ್ನು ನೀಡಿದ್ದಾರೆ. ಇಂತಹ ಸಮಯದಲ್ಲಿ ಸಮಯೋಚಿತ ವೈದ್ಯಕೀಯ ಚಿಕಿತ್ಸೆ ಎಷ್ಟು ಮುಖ್ಯ ಮತ್ತು ಮಾಹಿತಿಯಿಲ್ಲದ ಸಲಹೆಗ...