ಭಾರತ, ಫೆಬ್ರವರಿ 3 -- ತರಕಾರಿಗಳು ನಮ್ಮ ಆಹಾರದ ‍ಪ್ರಮುಖ ಭಾಗವಾಗಿವೆ. ಇವು ಆರೋಗ್ಯಕ್ಕೂ ಪ್ರಯೋಜನಕಾರಿ. ಪ್ರತಿದಿನ ಸಾಕಷ್ಟು ತರಕಾರಿಗಳನ್ನು ತಿನ್ನುವುದರಿಂದ ಹಲವು ಪೋಷಕಾಂಶಗಳು ದೊರೆಯುತ್ತವೆ. ಆದರೆ ಕೆಲವು ತರಕಾರಿಗಳನ್ನು ತಿನ್ನಲು ಭಯ ಪಡಬೇಕಾಗಿದೆ. ಯಾಕೆಂದರೆ ಇವುಗಳಲ್ಲಿ ಇರುವ ಹುಳ, ಕ್ರಿಮಿ-ಕೀಟಗಳು.

ಅದರಲ್ಲೂ ಎಲೆಕೋಸು ಮತ್ತು ಹೂಕೋಸು ತಿನ್ನುವ ಮುನ್ನ ಸಾಕಷ್ಟು ಎಚ್ಚರ ವಹಿಸಬೇಕು. ಯಾಕೆಂದರೆ ಇದರಲ್ಲಿ ಮೆದುಳಿಗೆ ಹಾನಿ ಮಾಡುವ ಹುಳಗಳಿವೆ. ಇವು ಸಣ್ಣ ಗಾತ್ರದ ಹುಳಗಳಾಗಿದ್ದು, ಇದು ಮೆದುಳು ಹಾಗೂ ರಕ್ತವನ್ನು ತಲುಪಿ ಸಂಪೂರ್ಣ ಆರೋಗ್ಯಕ್ಕೆ ಹಾನಿ ಮಾಡಬಹುದು. ಆದರೆ ಈ ಹುಳಗಳು ಕೋಸು ಮಾತ್ರವಲ್ಲ, ಇತರ ತರಕಾರಿಗಳಲ್ಲೂ ಕಂಡುಬರುತ್ತದೆ. ಈ ಕೆಲವು ತರಕಾರಿಗಳನ್ನು ತಿನ್ನುವ ಮೊದಲು ಚೆನ್ನಾಗಿ ಸ್ವಚ್ಛ ಮಾಡಬೇಕು. ಹಾಗಾದರೆ ಯಾವೆಲ್ಲಾ ತರಕಾರಿಗಳಲ್ಲಿ ಅಪಾಯಕಾರಿ ಕೀಟಗಳಿವೆ ನೋಡಿ.

ದಕ್ಷಿಣ ಭಾರತದಲ್ಲಿ ಬದನೆಕಾಯಿ ತಿನ್ನುವವರ ಸಂಖ್ಯೆ ಹೆಚ್ಚು. ಇದು ವರ್ಷಪೂರ್ತಿ ಲಭ್ಯವಿರುವ ತರಕಾರಿಯಾಗಿದೆ. ಇದರಿಂದ ಮಾಡಿದ ಸಾಂಬಾರ...