ಭಾರತ, ಮಾರ್ಚ್ 23 -- Huskur Madduramma Jatre Tragedy: ಆನೇಕಲ್ ತಾಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಶನಿವಾರ ಸಂಜೆ ಭಾರಿ ದುರಂತ ಸಂಭವಿಸಿದೆ. ಭಾರಿ ಗಾಳಿ ಮಳೆಗೆ ದೊಡ್ಡನಾಗಮಂಗಲ ಮತ್ತು ರಾಯಸಂದ್ರ ತೇರುಗಳು ನೆಲಕ್ಕೆ ಉರುಳಿ ಕಾರಣ ಇಬ್ಬರು ಮೃತಪಟ್ಟಿದ್ದು, ಕನಿಷ್ಠ 5 ಜನ ಗಾಯಗೊಂಡಿದ್ದಾರೆ. ಚಿಕ್ಕನಾಗಮಂಗಲ ಸಮೀಪ ದೊಡ್ಡನಾಗಮಂಗಲ ತೇರು ಹಾಗೂ ದೇವಸ್ಥಾನದ ಸಮೀಪ ರಾಯಸಂದ್ರದ ತೇರು ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಗಗನಚುಂಬಿ ತೇರುಗಳನ್ನು ಹುಸ್ಕೂರಿನತ್ತ ಎಳೆದೊಯ್ಯುತ್ತಿದ್ದ ವೇಳೆ ಭಾರಿ ಗಾಳಿ ಬೀಸಿದ ಕಾರಣ ನಿಯಂತ್ರಣ ತಪ್ಪಿ ಎರಡು ತೇರುಗಳು ಮಗುಚಿಬಿದ್ದಿವೆ. ಈ ಪೈಕಿ ದೇವಾಲಯದ ಬಳಿಯ ರಾಯಸಂದ್ರದ ತೇರು ಜನರ ಮೇಲೆ ಉರುಳಿದೆ. ಈ ತೇರಿನ ಕೆಳಗೆ ಸಿಲುಕಿದ ಇಬ್ಬರು ಭಕ್ತರು ಸಾವನ್ನಪ್ಪಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತರನ್ನು ತಮಿಳುನಾಡು ಹೊಸೂರಿನ ಲೋಹಿತ್‌ (24) ಮತ್ತು ಬೆಂಗಳೂರು ಕೆಂಗೇರಿ ಮೂಲದ ಜ್ಯೋತಿ (14) ಎಂದು ಗುರುತಿಸಲಾಗಿದೆ. ಲಕ್ಕಸಂದ್ರದ ರಾಕೇಶ್ ...