ಭಾರತ, ಫೆಬ್ರವರಿ 7 -- ಪ್ರೇಮಿಗಳ ದಿನದಂದು ಗುಲಾಬಿ ಕೊಟ್ಟೊಡನೆ ನಕ್ಕು ಮುಡಿಗೇರಿಸದಿರು ಹುಡುಗಿ. ಈ ತಿಂಗಳು ಪ್ರೇಮಿಗಳ‌ ತಿಂಗಳು. ಕಿಸ್‌ಡೇ, ಹಗ್ ಡೇ ರೋಸ್‌ ಡೇ ಅದೂ ಇದೂ. ರೋಸ್‌ಗಳ ಭರಾಟೆ ಜಾಸ್ತಿ. ಅದರ ಖುಷಿಯಲ್ಲಿ ನಲಿದಾಡುವ ಮೊದಲು ಹರೆಯದ ಹುಡುಗಿಯರೆಲ್ಲ ಈ ಕಥೆ ಓದಿ ಬಿಡಿ. ಒಟ್ಟಾರೆ ನಾನು ಹೇಳುವುದು ಇಷ್ಟೇ, ಮೋಡಿ ಮಾಡುವ ಮಾತಿಗೆ ಮರುಳಾಗಬೇಡಿ. ಯಾವುದೇ ಸಂದರ್ಭದಲ್ಲಿಯೂ ಸಾಧಕ-ಬಾಧಕ ಯೋಚಿಸಿಯೇ ಮುಂದಿನ ಹೆಜ್ಜೆ ಇಡಿ.

ಈ ಕಥೆ ಸುಮಾರು ಹತ್ತು ವರ್ಷದ ಹಿಂದಿನದು. ಆ ಹುಡುಗಿ ಆಗಷ್ಟೇ ಪಿಯುಸಿ‌‌ ಮೆಟ್ಟಿಲು ಹತ್ತಿದ್ದಳು. ಹದಿನಾರರ ಹರೆಯ. ಮುಗ್ಧತೆ ತುಂಬಿದ ಮುದ್ದು ಮುಖ. ಕನಸು ಕಂಗಳ ಹುಡುಗಿ. ದೇವರೆಂದರೆ ಅತೀವ ಭಕ್ತಿ. ತಾಯಿ-ತಂದೆ ಇಬ್ಬರೂ ತಮ್ಮ ಮಗಳ ಓದಿಗೆ, ಭವಿಷ್ಯಕ್ಕೆ ಹಣ-ಆಸ್ತಿ ಪಾಸ್ತಿ ಮಾಡಿರುವುದರಲ್ಲಿ ಬಹಳ ಬ್ಯುಸಿ ಆಗಿದ್ದರಿಂದ ಮಗಳ ಪ್ರಸ್ತುತ ಬದುಕಿನ ಬಗ್ಗೆ ಗಮನ ಹರಿಸಲು, ಕಾಳಜಿ ನೀಡಲು ಪುರುಸೊತ್ತಿರಲಿಲ್ಲ.

ಆ ಹುಡುಗಿಗೆ ಕಾಲೇಜು ಮೆಟ್ಟಿಲು ಹತ್ತಿದ ಕೊಂಚ‌ ದಿನಗಳಲ್ಲಿಯೇ ಇವಳ ಬಗ್ಗೆ ಕಾಳಜಿ ತೋರಿ...