ಭಾರತ, ಫೆಬ್ರವರಿ 13 -- ವಿಶ್ವ ಆರ್ಥಿಕತೆಯಲ್ಲಿ ಭಾರತ ತನ್ನ ಹೆಸರನ್ನು ವೇಗವಾಗಿ ಮೇಲ್ಮಟ್ಟಕ್ಕೆ ಏರಿಸಿಕೊಂಡು ಸಾಗುತ್ತಿರುವ ಈ ದಿನಗಳಲ್ಲಿ ಸದ್ದಿಲ್ಲದೆ ಎಲ್ಲೆಡೆ ಆಕ್ರಮಿಸಿರುವ ಸಮಸ್ಯೆಯೊಂದಕ್ಕೆ ನಾವು ಬೇಗ ಮದ್ದು ಕಂಡುಕೊಳ್ಳಬೇಕಿದೆ. ಈಗ ನಾನು ಪ್ರಸ್ತಾಪಿಸಲು ಹೊರಟ ಸಮಸ್ಯೆ ವಿಶ್ವವ್ಯಾಪಿ. ಇದು ಕೊರೋನಾಗಿಂತ ಭಯಾನಕ ಬಿಮಾರಿ. ಇದಕ್ಕೆ ಹೆಣ್ಣು ಗಂಡು ಎನ್ನುವ ಲಿಂಗಭೇದವಿಲ್ಲ, ವಯಸ್ಸಿನ ಹಂಗಿಲ್ಲ, ಬಡವ -ಶ್ರೀಮಂತ ಎನ್ನುವ ವ್ಯತ್ಯಾಸ ತಿಳಿಯುವುದಿಲ್ಲ. ತನ್ನ ತೆಕ್ಕೆಗೆ ಸಿಕ್ಕವರನ್ನೆಲ್ಲಾ ಸೇರಿಸಿಕೊಳ್ಳುತ್ತ ಸಾಗುತ್ತದೆ. ಸಾಗುತ್ತಿರುವುದು ಎಲ್ಲಿಗೆ? ಎಂದು ಚಿಂತಿಸುವ ವ್ಯವಧಾನ ಕೂಡ ನಮ್ಮಲ್ಲಿ ಯಾರಿಗೂ ಇಲ್ಲ.

ಇದು ಕೊರೋನಾಗಿಂತ ಹೆಚ್ಚು ಭಯಾನಕ ಅಂದಿದ್ದು ಏಕೆ ಗೊತ್ತೇ? ಕೊರೋನಾ ಸಮಸ್ಯೆ ಟೈಮ್ ಬೌಂಡ್ ಆಗಿತ್ತು. ಇವತ್ತಿಗೆ ಅದರ ಅರ್ಭಟ ಇಲ್ಲವೆನ್ನುವಷ್ಟು ಗೌಣವಾಗಿದೆ. ಆದರೆ ಇಂದು ಹೇಳಲು ಹೊರಟಿರುವ ಸಮಸ್ಯೆಗೆ ಸಮಯ ಮಿತಿಯಿಲ್ಲ. ಇನ್‌ಫ್ಯಾಕ್ಟ್‌ ಸಮಯ ಸರಿಯುತ್ತಾ ಹೋದಂತೆ ಈ ರೋಗಕ್ಕೆ ಬಲಿಯಾಗುವರ ಸಂಖ್ಯೆ ಹೆಚ್ಚುತ್...