Bengaluru, ಜನವರಿ 29 -- ಹುರುಳಿಯು ಕಂದು ಬಣ್ಣದ ಸಣ್ಣ ದ್ವಿದಳ ಧಾನ್ಯವಾಗಿದ್ದು, ಇದು ಪೌಷ್ಟಿಕ ಆಹಾರವಾಗಿದೆ. ದಕ್ಷಿಣ ಭಾರತ ಹಾಗೂ ಏಷ್ಯಾದ ಹಲವು ಭಾಗಗಳಲ್ಲಿ ಅಡುಗೆಗೆ ಹುರುಳಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದು ಅತ್ಯಂತ ಹಳೆಯ ಕೃಷಿ ಬೆಳೆಗಳಲ್ಲಿ ಒಂದಾಗಿದೆ. ಪ್ರೋಟೀನ್, ನಾರಿನಂಶ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಂತಹ ಅಗತ್ಯ ಖನಿಜಗಳಿಂದ ತುಂಬಿರುವ ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಉತ್ತಮ ಆಯ್ಕೆಯಾಗಿದೆ. ಮಧುಮೇಹಿಗಳಿಗೆ ಕೂಡ ಇದು ಉತ್ತಮ ಆಯ್ಕೆ.

ಹುರುಳಿ ಕಾಳಿನಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ಚಟ್ನಿ, ಸಾರು, ಬಸಳೆ ಸೊಪ್ಪಿನ ಸಾರಿನ ಜೊತೆ ಹುರುಳಿ ಕಾಳು ಬೆರೆಸಿ ತಯಾರಿಸಲಾಗುತ್ತದೆ. ಅಷ್ಟೇ ಅಲ್ಲ ಹುರುಳಿ ಕಾಳಿನ ಮಸಾಲೆ ಪುಡಿಯನ್ನೂ ತಯಾರಿಸಬಹುದು. ಇದನ್ನು ಒಮ್ಮೆ ಪುಡಿ ಮಾಡಿ ಸಂಗ್ರಹಿಸಿದರೆ ಆರು ತಿಂಗಳವರೆಗೆ ತಾಜಾವಾಗಿರುತ್ತದೆ. ಪ್ರತಿದಿನ ಇದನ್ನು ತಿನ್ನುವುದರಿಂದ ಹಲವು ಆರೋಗ್ಯ ಲಾಭಗಳಿವೆ. ಹಾಗಿದ್ದರೆ ಹುರುಳಿ ಕಾಳು ಮಸಾಲೆ ಪುಡಿ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತ...