Hubballi,Hubli,ಹುಬ್ಬಳ್ಳಿ, ಏಪ್ರಿಲ್ 29 -- ಹುಬ್ಬಳ್ಳಿ: ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು, ಬೇಸಿಗೆ ಪ್ರಯಾಣಿಕ ದಟ್ಟಣೆಯನ್ನು ನಿರ್ವಹಿಸುವುದಕ್ಕಾಗಿ ಯೋಗನಗರಿ ಋಷಿಕೇಶಕ್ಕೆ ಹುಬ್ಬಳ್ಳಿಯಿಂದ ವಿಶೇಷ ರೈಲು ಸಂಚಾರವನ್ನು ಪ್ರಕಟಿಸಿದೆ. ಇಂದಿನಿಂದ ಮೇ 27 ರ ತನಕ ಪ್ರತಿ ಸೋಮವಾರ ಹುಬ್ಬಳ್ಳಿ- ಋಷಿಕೇಶಕ್ಕೆ 5 ವಿಶೇಷ ರೈಲುಗಳು ಸಂಚರಿಸಲಿವೆ. ಅದೇ ರೀತಿ ಋಷಿಕೇಶ- ಹುಬ್ಬಳ್ಳಿ ನಡುವೆಯೂ ಮೇ 2 ರಿಂದ ಮೇ 30 ರನಕ ಪ್ರತಿ ಗುರುವಾರ ವಿಶೇಷ ರೈಲು ಸಂಚರಿಸಲಿದೆ.

ಎಸ್‌ಎಸ್‌ಎಸ್‌ ಹುಬ್ಬಳ್ಳಿ- ಯೋಗ ನಗರಿ ಋಷಿಕೇಶ- ಎಸ್‌ಎಸ್‌ಎಸ್ ಹುಬ್ಬಳ್ಳಿ ನಡುವೆ ರೈಲು ಸಂಖ್ಯೆ 06225/06226 ವಿಶೇಷ ರೈಲುಗಳು ವಿಶೇಷ ಸಮ್ಮರ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸಲಿವೆ ಎಂದು ಭಾರತೀಯ ರೈಲ್ವೆಯ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಘೋಷಿಸಿದೆ.

ಹುಬ್ಬಳ್ಳಿ- ಋಷಿಕೇಶ ನಡುವಿನ ಮೊದಲ ವಿಶೇಷ ರೈಲು ಇಂದು (ಏಪ್ರಿಲ್ 29) ರಾತ್ರಿ 9.45ಕ್ಕೆ ಹುಬ್ಬಳ್ಳಿಯಿಂದ ಋಷಿಕೇಶಕ್ಕೆ ಹೊರಡಲಿದೆ. ಈ ರೈಲು ಧಾರವಾಡ, ಬೆಳಗಾವಿ, ಘಟಪ್ರಭ, ಮಿರಾಜ್ ಜಂಕ್ಷನ್‌, ...